ಕರ್ನಾಟಕ

karnataka

ETV Bharat / city

ಮೈಸೂರಿನಲ್ಲಿ ಭಾರಿ ಮಳೆ: ಚಾಮುಂಡಿ ಬೆಟ್ಟದಲ್ಲಿ ಮತ್ತೆ ಭೂಕುಸಿತ - mysore

ಭಾರಿ ಮಳೆಯಿಂದಾಗಿ ಚಾಮುಂಡಿ ಬೆಟ್ಟದಲ್ಲಿ ಮತ್ತೆ ಭೂ ಕುಸಿತ ಸಂಭವಿಸಿದೆ. ಕಳೆದ 15 ದಿನಗಳ ಅಂತರದಲ್ಲಿ 3 ಬಾರಿ ಭೂ ಕುಸಿತವಾಗಿದೆ ಎಂದು ತಿಳಿದುಬಂದಿದೆ.

land slide at chamundi hill
ಚಾಮುಂಡಿ ಬೆಟ್ಟದಲ್ಲಿ ಭೂಕುಸಿತ- ಪ್ರತ್ಯಕ್ಷ ದೃಶ್ಯ

By

Published : Nov 5, 2021, 10:35 AM IST

ಮೈಸೂರು:ನಗರದಲ್ಲಿ ಗುರುವಾರ ಇಡೀ ರಾತ್ರಿ ಸುರಿದ ಭಾರಿ ಮಳೆಯಿಂದ ಚಾಮುಂಡಿ ಬೆಟ್ಟದಲ್ಲಿ ಮತ್ತೆ ಭೂಕುಸಿತ ಉಂಟಾಗಿದೆ.

ಚಾಮುಂಡಿ ಬೆಟ್ಟದ ನಂದಿ ಮಾರ್ಗದ ರಸ್ತೆಯಲ್ಲಿ 15 ದಿನಗಳ ಅಂತರದಲ್ಲಿ 3 ಬಾರಿ ಭೂ ಕುಸಿತವಾಗಿದೆ. ಬಿರುಕು ಬಿಟ್ಟಿರುವ ರಸ್ತೆ ಪರಿಶೀಲನೆ ಮಾಡಲು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್‌ನ(IISc) ತಜ್ಞರು ಇಂದು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡುತ್ತಿದ್ದಾರೆ.

ತಜ್ಞರ ನೀಡುವ ವರದಿ ಆಧಾರದ ಮೇಲೆ ಪಿಡಬ್ಲ್ಯೂ ಇಲಾಖೆ ಕೆಲಸ ಆರಂಭಿಸಲಿದೆ. ಮಣ್ಣಿನ ಸಾಂದ್ರತೆ, ಹೊಸ ತಂತ್ರಜ್ಞಾನದೊಂದಿಗೆ ಕೈಗೊಳ್ಳಬಹುದಾದ ದುರಸ್ತಿ ಕಾರ್ಯ ಕುರಿತಂತೆ ತಜ್ಞ ಭೂ ವಿಜ್ಞಾನಿಗಳು ವರದಿ ನೀಡಲಿದ್ದಾರೆ.

ಇದನ್ನೂ ಓದಿ:ಬೃಹತ್​ ಕಾಮಗಾರಿಗಳೇ ಚಾಮುಂಡಿ ಬೆಟ್ಟದ ರಸ್ತೆ ಭೂ ಕುಸಿತಕ್ಕೆ ಕಾರಣ: ಎಂ. ಲಕ್ಷ್ಮಣ್​

ABOUT THE AUTHOR

...view details