ಕರ್ನಾಟಕ

karnataka

ETV Bharat / city

ದೇವಾಲಯ ತೆರೆಯುವುದಕ್ಕೂ ಮುನ್ನವೇ ಅರ್ಚಕ, ಸಿಬ್ಬಂದಿ ಆರೋಗ್ಯ ತಪಾಸಣೆ - heath check up

ಕೊರೊನಾ ವೈರಸ್​ ಭೀತಿ ಹಿನ್ನೆಲೆ ನಂಜನಗೂಡಿನ ನಂಜುಂಡೇಶ್ವರ ದೇವಾಲಯದ ಪೂಜಾರಿ ಮತ್ತು ಸಿಬ್ಬಂದಿಗೆ ಆರೋಗ್ಯ ತಪಾಸಣೆ ಮಾಡಲಾಯಿತು.

heath check up
ಆರೋಗ್ಯ ತಪಾಸಣೆ

By

Published : Jun 6, 2020, 12:47 PM IST

ಮೈಸೂರು:ಜೂನ್​ 8ರಂದು ದೇವಾಲಯಗಳು ತೆರೆಯಲು ಅವಕಾಶವಿದ್ದು, ಮುಂಜಾಗ್ರತಾ ಕ್ರಮವಾಗಿ ದೇವಾಲಯದ ಪೂಜಾರಿ ಹಾಗೂ ಸಿಬ್ಬಂದಿಗೆ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ.

ದಕ್ಷಿಣಕಾಶಿ ಎಂದೇ ಖ್ಯಾತಿ ಗಳಿಸಿರುವ ನಂಜನಗೂಡಿನ ನಂಜುಂಡೇಶ್ವರ ದೇವಸ್ಥಾನದ ಪೂಜಾರಿ, ಸಿಬ್ಬಂದಿ, ದಾಸೋಹ ಸಿಬ್ಬಂದಿ ಸೇರಿದಂತೆ 240 ಮಂದಿಗೆ ಆರೋಗ್ಯ ತಪಾಸಣೆ ಮಾಡಲಾಯಿತು. ಥರ್ಮಲ್ ಸ್ಕ್ರೀನಿಂಗ್​​​, ಶುಗರ್, ಬಿಪಿ ತಪಾಸಣೆ ಮಾಡಲಾಯಿತು.

ದೇವಾಲಯದ ಸಿಬ್ಬಂದಿಗೆ ಆರೋಗ್ಯ ತಪಾಸಣೆ

ಆರೋಗ್ಯದಲ್ಲಿ ಸುಧಾರಣೆ ಕಂಡಿದ್ದರಷ್ಟೇ ಕರ್ತವ್ಯಕ್ಕೆ ಹಾಜರಾಗಲು ಸೂಚಿಸಲಾಗಿದೆ. ಭಕ್ತಾದಿಗಳು ಸಾಮಾಜಿಕ ಅಂತರ ಪಾಲನೆ ಮತ್ತು ಮಾಸ್ಕ್​ ಧರಿಸುವುದು ಕಡ್ಡಾಯ. ಇದು ದೇವಸ್ಥಾನ ಸಿಬ್ಬಂದಿಗೂ ಅನ್ವಯಿಸುತ್ತದೆ.

ABOUT THE AUTHOR

...view details