ಕರ್ನಾಟಕ

karnataka

ETV Bharat / city

ಮೈಸೂರಿನಲ್ಲಿ ಇಫ್ತಾರ್ ಕೂಟದಲ್ಲಿ ಭಾಗಿಯಾದ ಮಾಜಿ ಸಿಎಂ ಹೆಚ್​ಡಿಕೆ - JDS President C.M.Ibrahim

ಸಾರ್ವತ್ರಿಕ ಚುನಾವಣೆ ಸನಿಹವಾಗುತ್ತಿದ್ದಂತೆ ಮತದಾರರಿಗೆ ಗಾಳ ಹಾಕಲು ಜನಪ್ರತಿನಿಧಿಗಳು ಮುಂದಾಗಿದ್ದಾರೆ. ಮುಸ್ಲಿಂ ಮತಗಳ ಓಲೈಕೆಗೆ ತೀವ್ರ ಪೈಪೋಟಿ‌ ನಡೆಯುತ್ತಿದೆ. ಕಳೆದ ಭಾನುವಾರದಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು, ಮುಸ್ಲಿಂ ಬಾಂಧವರಿಗೆ ಇಫ್ತಾರ್ ಕೂಟ ಆಯೋಜಿಸಿದ್ದರು. ಈ ಬೆನ್ನಲ್ಲೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಯಿಂದ ಇಫ್ತಾರ್ ಕೂಟ ಆಯೋಜನೆ ಮಾಡಲಾಗಿತ್ತು..

HDK participated in Ifthihar
ಇಫ್ತಿಹಾರ್​ ಕೂಟದಲ್ಲಿ ಭಾಗಿಯಾದ ಹೆಚ್​ಡಿಕೆ

By

Published : Apr 25, 2022, 7:09 AM IST

ಮೈಸೂರು :ಇಫ್ತಾರ್ ಕೂಟದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಭಾಗಿವಹಿಸಿ ಹಿಂದೂ-ಮುಸ್ಲಿಂ ಬೇಧ ಬೇಡ. ಸಾಮರಸ್ಯ ಸಂದೇಶ ಸಾರಿ ಎಂದು ಸಲಹೆ ನೀಡಿದ್ದಾರೆ. ಮೈಸೂರು-ಬೆಂಗಳೂರು ರಸ್ತೆಯಲ್ಲಿರುವ ಮಿಲಾನ್ ಫಂಕ್ಷನ್ ಹಾಲ್​ನಲ್ಲಿ ಭಾನುವಾರ ಏರ್ಪಡಿಸಿದ್ದ ಇಫ್ತಾರ್ ಕೂಟದಲ್ಲಿ ಭಾಗವಹಿಸಿ ಮುಸ್ಲಿಂ ಬಾಂಧವರಿಗೆ ಶುಭ ಕೋರಿದರು.

ಮೈಸೂರಿನಲ್ಲಿ ಇಫ್ತಾರ್​ ಕೂಟದಲ್ಲಿ ಭಾಗಿಯಾದ ಮಾಜಿ ಸಿಎಂ ಹೆಚ್​ಡಿಕೆ..

ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ಶಾಂತಿ ಸಾಮರಸ್ಯದಿಂದ ಬದುಕೋಣ. ಶಾಂತಿ ಕದಡುವ ಶಕ್ತಿಗಳ ವಿರುದ್ಧ ಎಚ್ಚರಿಕೆ ವಹಿಸಿಸೋಣ. ಹಿಂದೂ-ಮುಸ್ಲಂ ಒಗ್ಗಟ್ಟನ್ನು ಮುರಿಯುವ ಶಕ್ತಿಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಸಮಾಜದಲ್ಲಿ ಸಾಮರಸ್ಯ ಕದಡುವವರಿಂದ ದೂರವಿರಿ ಎಂದು ಸಲಹೆ ನೀಡಿದರು.

ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಮಾತನಾಡಿ, ಮುಂದಿನ ಬಾರಿ ಉತ್ತಮ ಸರ್ಕಾರ ತರೋಣ, ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಸಿಎಂ ಮಾಡೋಣ ಎಂದು ಕಾರ್ಯಕರ್ತರಿಗೆ ಮನವಿ ಮಾಡಿದರು. ಶಾಸಕರಾದ ಸಾರಾ ಮಹೇಶ್, ಅಶ್ವಿನ್‌ಕುಮಾರ್, ಎಂಎಲ್ಸಿಗಳಾದ ಕೆ.ಟಿ ಶ್ರೀಕಂಠೇಗೌಡ, ಸಿ.ಎನ್ ಮಂಜೇಗೌಡ ಸೇರಿದಂತೆ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಹಾಜರಿದ್ದರು.

ಮತದಾರರಿಗೆ ಗಾಳ :ಸಾರ್ವತ್ರಿಕ ಚುನಾವಣೆ ಸನಿಹವಾಗುತ್ತಿದ್ದಂತೆ ಮತದಾರರಿಗೆ ಗಾಳ ಹಾಕಲು ಜನಪ್ರತಿನಿಧಿಗಳು ಮುಂದಾಗಿದ್ದಾರೆ. ಮುಸ್ಲಿಂ ಮತಗಳ ಓಲೈಕೆಗೆ ತೀವ್ರ ಪೈಪೋಟಿ‌ ನಡೆಯುತ್ತಿದೆ. ಕಳೆದ ಭಾನುವಾರದಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು, ಮುಸ್ಲಿಂ ಬಾಂಧವರಿಗೆ ಇಫ್ತಾರ್ ಕೂಟ ಆಯೋಜಿಸಿದ್ದರು. ಈ ಬೆನ್ನಲ್ಲೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಯಿಂದ ಇಫ್ತಾರ್ ಕೂಟ ಆಯೋಜನೆ ಮಾಡಲಾಗಿತ್ತು.

ಇದನ್ನೂ ಓದಿ:ಜೆಡಿಎಸ್ ದಳಪತಿಗಳಿಂದ ಮೈಸೂರು ರೌಂಡ್ಸ್.. ಸಾರ್ವತ್ರಿಕ ಚುನಾವಣಾ ಅಖಾಡಕ್ಕೆ ತಾಲೀಮು..

ABOUT THE AUTHOR

...view details