ಮೈಸೂರು: ಮೇಯರ್ ಆಯ್ಕೆ ಸಂಬಂಧ ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರು ತನ್ವೀರ್ ಸೇಠ್ ಅವರ ವಿರುದ್ಧ ತಿರುಗಿ ಬಿದ್ದಿದ್ದು, 'ತನ್ವೀರ್ ಅವರ ಬೆಂಬಲಕ್ಕೆ ನಾವು ನಿಲ್ಲುತ್ತೇವೆ' ಎನ್ನುವ ಮೂಲಕ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಜೆಡಿಎಸ್ಗೆ ಪರೋಕ್ಷವಾಗಿ ಆಹ್ವಾನಿಸಿದ್ದಾರೆ.
ಮೈಸೂರು ಮೇಯರ್ ಆಯ್ಕೆ: ತನ್ವೀರ್ ಸೇಠ್ ಬೆಂಬಲಕ್ಕೆ ನಿಂತ ಎಚ್ಡಿಕೆ, ಪರೋಕ್ಷವಾಗಿ ಜೆಡಿಎಸ್ಗೆ ಆಹ್ವಾನ! - ತನ್ವೀರ್ ಸೇಠ್
ಮೇಯರ್ ಚುನಾವಣೆಯಲ್ಲಿ ಬಿಜೆಪಿಯನ್ನು ಹೊರಗಿಡುವ ಉದ್ದೇಶದಿಂದ ಸೂಕ್ತ ನಿರ್ಧಾರ ತೆಗೆದುಕೊಂಡಿದ್ದಾರೆ. ತನ್ವೀರ್ ಸೇಠ್ ತಬ್ಬಲಿ ಮಾಡಲು ಅವರ ಪಕ್ಷದವರು ಮುಂದಾದರೆ ನಾನು ಬಿಡುವುದಿಲ್ಲ. ಅವರ ಬೆನ್ನಿಗೆ ನಾನು ನಿಲ್ಲುತ್ತೇನೆ ಎಂದು ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಈ ಕುರಿತು ಮಾಧ್ಯಮಗಳ ಜತೆ ಮಾತನಾಡಿದ ಅವರು, ಮೇಯರ್ ಚುನಾವಣೆಯಲ್ಲಿ ಬಿಜೆಪಿಯನ್ನು ಹೊರಗಿಡುವ ಉದ್ದೇಶದಿಂದ ಸೂಕ್ತ ನಿರ್ಧಾರ ತೆಗೆದುಕೊಂಡಿದ್ದಾರೆ. ತನ್ವೀರ್ ಸೇಠ್ ತಬ್ಬಲಿ ಮಾಡಲು ಅವರ ಪಕ್ಷದವರು ಮುಂದಾದರೆ ನಾನು ಬಿಡುವುದಿಲ್ಲ. ಅವರ ಬೆನ್ನಿಗೆ ನಾನು ನಿಲ್ಲುತ್ತೇನೆ ಎಂದರು.
ಶಾಸಕ ತನ್ವೀರ್ ಸೇಠ್ ಅವರನ್ನು ಸೋಲಿಸಲು ಚುನಾವಣೆ ಸಂದರ್ಭದಲ್ಲಿ ನಾವು ಯತ್ನಿಸಿದ್ದೇವೆ. ಕ್ಷೇತ್ರದಲ್ಲಿ ತಮ್ಮದೆಯಾದ ವರ್ಚಸ್ಸು ಹೊಂದಿದ್ದರಿಂದ ಅವರನ್ನು ಸೋಲಿಸಲು ಆಗುವುದಿಲ್ಲ. ಕೋಮುವಾದಿ-ಜಾತ್ಯತೀತ ಅಂತ ಹೇಳಿಕೆ ನೀಡುತ್ತಾರೆ. ಆದರೆ, ಅವರು ಹೇಗೆ ನಡೆದುಕೊಳ್ಳುತ್ತಾರೆ ಎನ್ನುವುದು ಗೊತ್ತು ಎಂದು ಮಾಜಿ ಸಿಎಂ ಸಿದ್ದರಾಮಯ್ಯರಿಗೆ ತಿರುಗೇಟು ನೀಡಿದರು.