ಕರ್ನಾಟಕ

karnataka

ETV Bharat / city

ಲಾಕ್​ಡೌನ್​ ಉಲ್ಲಂಘನೆ: ಹಣ ಪಡೆದುಕೊಳ್ಳಲು ಬ್ಯಾಂಕ್ ಮುಂದೆ ಜನದಟ್ಟಣೆ - ಕೊರೊನಾ ವೈರಸ್​

ಕೊರೊನಾ ವೈರಸ್ ಹರಡುವಿಕೆ​ ಸಂಪೂರ್ಣವಾಗಿ ತಡೆಯಲು ಸರ್ಕಾರ ಹರಸಾಹಸ ಮಾಡುತ್ತಿದ್ದರೆ, ಜನರು ಬೇಜವಾಬ್ದಾರಿತನ ತೋರುತ್ತಿದ್ದಾರೆ.

hd-kote-people-break-the-lock-down-rules
ಕರ್ನಾಟಕ ಗ್ರಾಮೀಣ ಬ್ಯಾಂಕ್​​

By

Published : Apr 13, 2020, 4:18 PM IST

ಮೈಸೂರು:ಬ್ಯಾಂಕ್ ಮುಂದೆ ಜನರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ ಗುಂಪುಗುಂಪಾಗಿ ನಿಂತು ಹಣ ಪಡೆಯುತ್ತಿದ್ದ ದೃಶ್ಯ ಎಚ್.ಡಿ.ಕೋಟೆ ಕಂಡುಬಂತು.

ಜಿಲ್ಲೆಯಲ್ಲಿ ಲಾಕ್ ಡೌನ್ ಘೋಷಿಸಿದ್ದು, ಯಾರೊಬ್ಬರೂ ಮನೆಯಿಂದ ಹೊರಬರದಂತೆ ಜಿಲ್ಲಾಡಳಿತ ಸಾಕಷ್ಟು ಬಾರಿ ಎಚ್ಚರಿಕೆ ನೀಡಿದೆ. ಆದರೆ ಪಟ್ಟಣದ ಕರ್ನಾಟಕ ಗ್ರಾಮೀಣ ಬ್ಯಾಂಕ್​​ನಲ್ಲಿ ಜನರು ಲಾಕ್‌ಡೌನ್ ನಿಯಮ ಮೀರಿ ನಡೆದುಕೊಂಡರು.

ಹಣ ಪಡೆದುಕೊಳ್ಳಲು ಬ್ಯಾಂಕ್ ಮುಂದೆ ಜನರ ಕ್ಯೂ

ಪ್ರಧಾನಿ ನರೇಂದ್ರ ಮೋದಿ ಯೋಜನೆಯಡಿ ರೈತರ ಖಾತೆಗೆ 500 ರೂ. ಉಚಿತ ಗ್ಯಾಸ್ ಖರೀದಿಯ ಹಣ ಖಾತೆಗೆ ಜಮೆ ಆಗಿದೆ ಎಂದು ತಿಳಿದ ಜನರು ಹಣವನ್ನು ಪಡೆಯಲು ಬೆಳಿಗ್ಗೆ 6 ಗಂಟೆಯಿಂದಲೇ ಬ್ಯಾಂಕ್ ಮುಂದೆ ಕ್ಯೂ ನಿಂತಿದ್ದರು.

ಈ ವೇಳೆ ಜನರ ಗುಂಪು ಕಂಡ ಪೊಲೀಸರು ನಿಯಂತ್ರಿಸಲು ಹರಸಾಹಸಪಟ್ಟರು.

ABOUT THE AUTHOR

...view details