ಮೈಸೂರು:ಎರಡು ತಿಂಗಳ ಕಂತಿನ ಹಣ ಕಟ್ಟಿಲ್ಲ ಎಂದು ಖಾಸಗಿ ಮೈಕ್ರೋ ಫೈನಾನ್ಸ್ ಕಂಪನಿ ಬಡ ಮಹಿಳೆಯ ಮನೆಗೆ ಬೀಗ ಹಾಕಿ ಅಮಾನವೀಯತೆ ಮೆರೆದಿರುವ ಘಟನೆ ನಂಜನಗೂಡು ತಾಲೂಕಿನ ತಗಡೂರು ಗ್ರಾಮದಲ್ಲಿ ನಡೆದಿದೆ.
ಕಂತಿನ ಹಣ ಕಟ್ಟಿಲ್ಲ ಎಂದು ಫೈನಾನ್ಸ್ ಕಂಪನಿಯಿಂದ ಮನೆಗೆ ಬೀಗ.. ಜಿಲ್ಲೆಯ ನಂಜನಗೂಡು ತಾಲೂಕಿನ ತಗಡೂರು ಗ್ರಾಮದ ಪದ್ಮ ಹಾಗೂ ಸುಶೀಲಾ ಎಂಬುವರ ಮನೆಗೆ ಬೀಗ ಹಾಕಿದ್ದಲ್ಲದೇ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಮಹಿಳೆಯರು ಆರೋಪಿಸಿದ್ದಾರೆ.
ಗ್ರಾಮಶಕ್ತಿ ಮೈಕ್ರೋ ಫೈನಾನ್ಸ್ ಕಂಪನಿಯಿಂದ ಗುಂಪು ಸಾಲ ಪಡೆದಿದ್ದರು. 11 ತಿಂಗಳ ಕಂತಿನ ಹಣವನ್ನು ಈಗಾಗಲೇ ಪಾವತಿಸಿದ್ದು, ಉಳಿದ ಕಂತಿನ ಹಣವನ್ನು ಪಾವತಿ ಮಾಡಿರಲಿಲ್ಲ. ಹೀಗಾಗಿ ಮನೆಗೆ ಬೀಗ ಹಾಕಿದ ಕಂಪನಿಯವರು ಅಮಾನವೀಯವಾಗಿ ವರ್ತಿಸಿದ್ದು, ಈಗ ಆ ಮಹಿಳೆ ತನ್ನ ಮನೆ ಒಳಗೆ ಹೋಗಲು ಹರಸಾಹಸ ಪಡುತ್ತಿದ್ದಾರೆ. ಮನೆಯ ಹೊರಗೆ ಇರುವ ಮೆಟ್ಟಿಲುಗಳ ಸಹಾಯದಿಂದ ಹತ್ತಿ ಮನೆಯ ಒಳಗೆ ಏಣಿ ಸಹಾಯದಿಂದ ಇಳಿದು ಭಯದಿಂದಲೇ ಜೀವನ ಸಾಗಿಸುತ್ತಿದ್ದಾರೆ.
ಇನ್ನು, ಘಟನೆಗೆ ಸಂಬಂಧಿಸಿದಂತೆ ಯಾವುದೇ ದೂರು ದಾಖಲಾಗಿಲ್ಲ.