ಮೈಸೂರು: ಅಜಾದಿ ಕಾ ಅಮೃತ್ ಮಹೋತ್ಸವದಲ್ಲಿ ಹರ್ ಘರ್ ತಿರಂಗ ಅಭಿಯಾನ ಪ್ರತಿಯೊಬ್ಬ ಭಾರತೀಯನು ದೇಶಭಕ್ತಿ ತೋರಿಸಲು ಸೂಕ್ತವಾದ ಅವಕಾಶವಾಗಿದೆ ಎಂದು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹರ್ ಘರ್ ತಿರಂಗದ ಬಗ್ಗೆ ಈಟಿವಿ ಭಾರತ್ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಅಜಾದಿ ಕಾ ಅಮೃತ್ ಮಹೋತ್ಸವ ಹಿನ್ನೆಲೆಯಲ್ಲಿ ದೇಶದ ಪ್ರಧಾನಿ ಪ್ರತಿಯೊಂದು ಮನೆಯಲ್ಲೂ ತ್ರಿವರ್ಣ ಧ್ವಜ ಹಾರಿಸುವಂತೆ ಕರೆ ನೀಡಿದ್ದು, ಈ ಸಂದರ್ಭದಲ್ಲಿ ಸರಿಯಾಗಿದೆ. ಭಾರತದ ಪ್ರತಿಯೊಂದು ಪ್ರಜೆಯು ದೇಶಭಕ್ತಿ ತೋರಿಸಲು ಸೂಕ್ತವಾದ ಅವಕಾಶ ಇದಾಗಿದ್ದು, ನಮ್ಮ ದೇಶಭಕ್ತಿಯನ್ನು ಮೆರೆಯುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ. ಪ್ರಧಾನಿಯವರ ಕರೆಯನ್ನು ನಾವೆಲ್ಲ ಅನುಸರಿಸಬೇಕು ಎಂದು ಹೇಳಿದರು.
ಹರ್ ಘರ್ ತಿರಂಗಾ ಬಗ್ಗೆ ರಾಜವಂಶಸ್ಥ ಯದುವೀರ್ ಪ್ರತಿಕ್ರಿಯೆ ರಾಜ ಮನೆತನದಲ್ಲಿ ಹರ್ ಘರ್ ತಿರಂಗಾ ಆಚರಣೆ ಹೇಗಿರಲಿದೆ?: ಈ ಪ್ರಶ್ನೆಗೆ ಉತ್ತರಿಸಿದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು, ಈಗಿನ ವ್ಯವಸ್ಥೆಯಲ್ಲಿ ಎಲ್ಲರೂ ಒಂದೇ, ರಾಜ ವ್ಯವಸ್ಥೆ ಹಿಂದಿನ ಕಾಲಕ್ಕೆ ಸೀಮಿತವಾಗಿದೆ. ಎಲ್ಲರೂ ಈ ದೇಶದ ಪ್ರಜೆಗಳಾಗಿದ್ದು, ಒಗ್ಗಟ್ಟಿನ ಪ್ರದರ್ಶನಕ್ಕೆ ಹರ್ ಘರ್ ತಿರಂಗಾ ಅಭಿಯಾನ ಉತ್ತಮ ವೇದಿಕೆಯಾಗಿದೆ ಎಂದು ಹೇಳುವ ಮೂಲಕ ರಾಜರು ಸಾಮಾನ್ಯರಂತೆ ಈಗ ಈ ದೇಶದ ಪ್ರಜೆಗಳು ಎಂದರು.
ಜನ ಸಾಮಾನ್ಯರು ಹರ್ ಘರ್ ತಿರಂಗಾ ಅಭಿಯಾನದಲ್ಲಿ ಯಾವ ರೀತಿ ಭಾಗವಹಿಸಬೇಕು?:ಎಲ್ಲರೂ ಹರ್ ಘರ್ ತಿರಂಗಾ ಅಭಿಯಾನವನ್ನು ಅನುಸರಿಸಿ ನಿಮ್ಮ ದೇಶಭಕ್ತಿಯನ್ನು ತೋರಿಸಿ. ಇದು ಬಹಳ ದೊಡ್ಡ ಕೆಲಸವಲ್ಲ. ಎಲ್ಲರೂ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು. ನಮ್ಮ ಪೂರ್ವಜರು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದಾರೆ. ಅವರ ತ್ಯಾಗವನ್ನು ನಾವು ಸ್ಮರಿಸುವುದು ನಮ್ಮ ಕರ್ತವ್ಯ ಎಂದು ಎಲ್ಲರೂ ಹರ್ ಘರ್ ತಿರಂಗಾ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದರು.
ಇದನ್ನೂ ಓದಿ :ಸ್ವಾತಂತ್ರ್ಯ ಅಮೃತ ಮಹೋತ್ಸವ ನಡಿಗೆಯಲ್ಲಿ ಪುತ್ರರೊಂದಿಗೆ ಶಾಸಕ ನಡಹಳ್ಳಿ ಸಖತ್ ಸ್ಟೆಪ್ಸ್