ಕರ್ನಾಟಕ

karnataka

ETV Bharat / city

ಸಿಎಂ ಬದಲಾವಣೆ ಪಕ್ಷದ ನಿರ್ಧಾರವಲ್ಲ, ಅವರವರ ವೈಯಕ್ತಿಕ ಹೇಳಿಕೆ: ಎಚ್.ವಿಶ್ವನಾಥ್ - ಸಿಎಂ ಬದಲಾವಣೆ ಪಕ್ಷದ ನಿರ್ಧಾರವಲ್ಲ

ರಾಜ್ಯದ ಸಿಎಂ ಆಗಿ ಬಿಎಸ್​​ವೈ ಮುಂದುವರಿಯಲಿದ್ದಾರೆ. ಯತ್ನಾಳ್ ಅವರು ತಮ್ಮ ಅನಿಸಿಕೆ ಹೇಳಿದ್ದಾರೆ. ಸಿಎಂ ಸ್ಥಾನ ಬದಲಾವಣೆಯಾಗುವುದಿಲ್ಲ- ಎಚ್.ವಿಶ್ವನಾಥ್

h-viswanath-talk-about-change-of-karnataka-cm-issue
ಸಿಎಂ ಬದಲಾವಣೆ ಪಕ್ಷದ ನಿರ್ಧಾರವಲ್ಲ, ಅವರವರ ವೈಯಕ್ತಿಕ ಹೇಳಿಕೆ: ಎಚ್.ವಿಶ್ವನಾಥ್

By

Published : Oct 21, 2020, 3:34 PM IST

ಮೈಸೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಪಕ್ಷದ ನಿರ್ಧಾರವಲ್ಲ, ಅವರವರ ವೈಯಕ್ತಿಕ ಹೇಳಿಕೆ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿದ್ದಾರೆ.

ಸಿಎಂ ಬದಲಾವಣೆ ಹೇಳಿಕೆ ವಿಚಾರವಾಗಿ ವಿಧಾನ ಪರಿಷತ್ ಸದಸ್ಯ ಹೆಚ್‌.ವಿಶ್ವನಾಥ್‌ ಮಾಧ್ಯಮಗಳೊಂದಿಗೆ ಮಾತನಾಡಿದರು.‌

ಮೈಸೂರಿನಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸುತ್ತಾ, ರಾಜ್ಯದ ಸಿಎಂ ಆಗಿ ಬಿಎಸ್​​ವೈ ಮುಂದುವರಿಯಲಿದ್ದಾರೆ. ಯತ್ನಾಳ್ ಅವರು ತಮ್ಮ ಅನಿಸಿಕೆ ಹೇಳಿದ್ದಾರೆ. ಸಿಎಂ ಸ್ಥಾನ ಬದಲಾವಣೆಯಾಗುವುದಿಲ್ಲ ಎಂದು ಹೇಳಿದರು.

ಇನ್ನು, 'ಬಾಂಬೆ ಡೇಸ್' ಪುಸ್ತಕವನ್ನು ಖಂಡಿತವಾಗಿಯೂ ಹೊರತರುತ್ತೇನೆ. ಈ ಪುಸ್ತಕ ತರುವುದು ಏಕಪಾತ್ರಾಭಿನಯವಲ್ಲ.‌ ಅಂದು ಜೊತೆಯಲ್ಲಿದ್ದವರ ಜೊತೆ ಪ್ರಮಾಣಿಕವಾಗಿ ಚರ್ಚೆ ಮಾಡಿ ಬರೆಯುತ್ತೇನೆ ಎಂದರು.

ಪ್ರತಾಪ್​​ಸಿಂಹ ಹೇಳಿಕೆ‌ಗೆ ಪ್ರತಿಕ್ರಿಯಿಸುತ್ತಾ, ಮಾತಿನಲ್ಲಿ ಹಿಡಿತ ಇರಬೇಕು. ರಾಜ್ಯದ ಎಲ್ಲ ಜನಾಂಗಕ್ಕೂ ಅಧಿಕಾರದ ಹಕ್ಕಿದೆ ಎಂದು ಗರಂ ಆಗಿಯೇ ಹೇಳಿದರು.

ABOUT THE AUTHOR

...view details