ಮೈಸೂರು : ಸರ್ಕಾರದಲ್ಲಿ ಗುಣಾತ್ಮಕ ಸುಧಾರಣೆಗೆ ಬದಲಾವಣೆಗಳು ಆಗಬೇಕು. ವಿಜಯೇಂದ್ರರನ್ನು ಮಂತ್ರಿ ಮಾಡಿದರೆ ಗುಣಾತ್ಮಕ ಬದಲಾವಣೆ ಆಗಲು ಸಾಧ್ಯವೇ ಎಂದು ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಹೇಳಿದ್ದಾರೆ. ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಹೆಚ್ ವಿಶ್ವನಾಥ್, ವಿಜಯೇಂದ್ರಗೆ ಸಚಿವ ಸ್ಥಾನ ನೀಡುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದು, ವಿಜಯೇಂದ್ರ ಸಚಿವ ಆಗುವುದಾದರೆ ಆಗಲಿ ಬಿಡಿ. ಆದರೆ, ಗುಣಾತ್ಮಕ ಸುಧಾರಣೆಗೆ ಬದಲಾವಣೆಗಳು ಆಗಬೇಕು. ವಿಜಯೇಂದ್ರನಿಗೆ ಮಂತ್ರಿ ಸ್ಥಾನ ನೀಡಿದರೆ ಗುಣಾತ್ಮಕ ಬದಲಾವಣೆ ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.
ಯಾರ್ರೀ ಅದು ಹೆಡ್ಗೇವಾರ್?: ಪಠ್ಯ ಪುಸ್ತಕ ಪರಿಷ್ಕರಣೆಯಲ್ಲಿ ರಾಜಕೀಯ ಸಂಘರ್ಷ ಒಳ್ಳೆಯದಲ್ಲ. ನಾವೆಲ್ಲಾ ಸೇರಿ ಶಿಕ್ಷಣವನ್ನು ಹಾಳು ಮಾಡುತ್ತಿದ್ದೇವೆ. ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷರಾಗಿ ನೇಮಕಗೊಂಡ ರೋಹಿತ್ ಚಕ್ರತೀರ್ಥ ಶಿಕ್ಷಣ ತಜ್ಞನಲ್ಲ. 12 ಪುಸ್ತಕ ಬರೆದಿದ್ದಾನೆ. ಒಂದೆರಡು ಲೇಖನಗಳನ್ನ ಬರೆದಿದ್ದಾನೆ. ಆತ ಸಂಘ ಪರಿವಾರದ ಕಾರ್ಯಕರ್ತ. ಇಂಥವರನ್ನು ಅಧ್ಯಕ್ಷನನ್ನಾಗಿ ಮಾಡಿರುವುದು ದುರಂತ.