ಮೈಸೂರು :ದ್ವಿತೀಯ ಪಿಯುಸಿಯಲ್ಲಿ ಬಾಕಿ ಇರುವ ಇಂಗ್ಲೀಷ್ ಪರೀಕ್ಷೆ ನಡೆಸುವ ಅವಶ್ಯಕತೆ ಇಲ್ಲ. ಎಲ್ಲರನ್ನೂ ಪಾಸ್ ಮಾಡಿ ಪಿಯುಸಿ ಫಲಿತಾಂಶ ಪ್ರಕಟಿಸಿ ಎಂದು ಮಾಜಿ ಶಿಕ್ಷಣ ಮಂತ್ರಿ ಅಡಗೂರು ಹೆಚ್ ವಿಶ್ವನಾಥ್ ಅವರು ರಾಜ್ಯ ಸರ್ಕಾರವನ್ನ ಒತ್ತಾಯಿಸಿದ್ದಾರೆ.
ಇಂಗ್ಲೀಷ್ ಪರೀಕ್ಷೆ ನಡೆಸುವ ಅವಶ್ಯಕತೆ ಇಲ್ಲ, ಎಲ್ಲರನ್ನೂ ಪಾಸ್ ಮಾಡಿ.. ಹೆಚ್.ವಿಶ್ವನಾಥ್ - ಕರ್ನಾಟಕ ಶಿಕ್ಷಣ ಇಲಾಖೆ
ಈಗ ಕೊರೊನಾ ಹಿನ್ನೆಲೆ ಲಾಕ್‌ಡೌನ್ ಇರುವುದರಿಂದ ಪಿಯುಸಿ ಇಂಗ್ಲೀಷ್ ಪರೀಕ್ಷೆ ನಡೆದಿಲ್ಲ. ನಂತರ ಅದನ್ನು ನಡೆಸುವ ಅವಶ್ಯಕತೆಯೂ ಇಲ್ಲ. ಈಗಾಗಲೇ ನಡೆದಿರುವ ಪರೀಕ್ಷೆಗಳ ಮೌಲ್ಯ ಮಾಪನವನ್ನು ಸಾಮಾಜಿಕ ಅಂತರ ಕಾಯ್ದುಕೊಂಡು ನಡೆಸುವಂತೆ ಸಲಹೆ ನೀಡಿದರು.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪಿಯುಸಿ ವಿದ್ಯಾರ್ಥಿಗಳ ಜೀವನದಲ್ಲಿ ಮುಖ್ಯವಾದ ಘಟ್ಟ. ಈಗ ಕೊರೊನಾ ಹಿನ್ನೆಲೆ ಲಾಕ್‌ಡೌನ್ ಇರುವುದರಿಂದ ಪಿಯುಸಿ ಇಂಗ್ಲೀಷ್ ಪರೀಕ್ಷೆ ನಡೆದಿಲ್ಲ. ನಂತರ ಅದನ್ನು ನಡೆಸುವ ಅವಶ್ಯಕತೆಯೂ ಇಲ್ಲ. ಈಗಾಗಲೇ ನಡೆದಿರುವ ಪರೀಕ್ಷೆಗಳ ಮೌಲ್ಯ ಮಾಪನವನ್ನು ಸಾಮಾಜಿಕ ಅಂತರ ಕಾಯ್ದುಕೊಂಡು ನಡೆಸುವಂತೆ ಸಲಹೆ ನೀಡಿದರು.
ಆದಷ್ಟು ಬೇಗ ಇಂಗ್ಲೀಷ್ನಲ್ಲಿ ಎಲ್ಲಾ ವಿದ್ಯಾರ್ಥಿಗಳನ್ನು ಉತ್ತೀರ್ಣರನ್ನಾಗಿಸಿ ಫಲಿತಾಂಶವನ್ನು ತಕ್ಷಣ ಪ್ರಕಟಿಸಿ. ಪೋಷಕರಲ್ಲಿರುವ ಆತಂಕ ದೂರು ಮಾಡಬೇಕು. ಈಗಾಗಲೇ ಈ ಕುರಿತು ನಾನು ಶಿಕ್ಷಣ ಸಚಿವರ ಜೊತೆ ಮಾತನಾಡಿದ್ದೇನೆ ಎಂದು ಹೆಚ್ ವಿಶ್ವನಾಥ್ ಹೇಳಿದರು.