ಮೈಸೂರು: ನಾನು ಮಂತ್ರಿ ಆಗುವುದು ನಿಮಗೆ ಡೌಟಾ..? ಎಂದು ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಅವರು ಮಾಧ್ಯಮದವರಿಗೆ ಮರು ಪ್ರಶ್ನೆ ಹಾಕಿದ ಪ್ರಸಂಗ ನಗರದಲ್ಲಿ ನಡೆಯಿತು.
ಇಂದು ಮೈಸೂರಿಗೆ ಆಗಮಿಸಿದ ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ಜೊತೆ ಸಂಸದ ಶ್ರೀನಿವಾಸ್ ಪ್ರಸಾದ್, ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಗೌಪ್ಯ ಮಾತುಕತೆ ನಡೆಸಿದರು. ನಂತರ ಮಾಧ್ಯಮಗಳ ಜೊತೆ ಮಾತನಾಡಿ, ಇವತ್ತು ಬಿಜೆಪಿ ಉಪಾಧ್ಯಕ್ಷರಾಗಿ ಆಯ್ಕೆಯಾದ ನಂತರ ವರುಣ ಕಾರ್ಯಕರ್ತರ ಸಭೆ ನಡೆಸಲು ವಿಜಯೇಂದ್ರ ಆಗಮಿಸಿದ್ದು, ಇಲ್ಲಿ ಬೇರೆ ಉದ್ದೇಶ ಇಲ್ಲವೆಂದು ತಿಳಿಸಿದರು.
ಬಿಎಸ್ವೈ ಸರ್ಕಾರದಲ್ಲಿ ಮಂತ್ರಿಯಾಗುವ ನಿರೀಕ್ಷೆಯಲ್ಲಿ ಹೆಚ್ ವಿಶ್ವನಾಥ್ ಶ್ರೀನಿವಾಸ್ ಪ್ರಸಾದ್ ಮನೆಯಲ್ಲಿ ಮಂತ್ರಿ ಮಂಡಲದ ವಿಷಯ ಚರ್ಚೆಯಾಗಿಲ್ಲ. ಮಂತ್ರಿಯಾಗುವ ಬಗ್ಗೆ ನಂಬಿಕೆ ಇದೆಯಾ ಎಂಬ ಮಾಧ್ಯಮದವರ ಪ್ರಶ್ನೆಗೆ, ರಾಜಕಾರಣದಲ್ಲಿ ಹೀಗೆ ಆಗುತ್ತದೆ, ಹಾಗೆ ಆಗುತ್ತದೆ ಎಂದು ಹೇಳುವುದಕ್ಕೆ ಆಗಲ್ಲ. ನಾನು ಮಂತ್ರಿ ಆಗುವುದು ನಿಮಗೇ ಡೌಟಾ ಎಂದು ಮರು ಪ್ರಶ್ನೆ ಹಾಕಿದರು.
ಶಾಸಕ ಸಾ.ರಾ. ಮಹೇಶ್ ಅವರು ಹೆಚ್ ವಿಶ್ವನಾಥ್ ಭಿಕ್ಷುಕ ಎಂಬ ಪದ ಬಳಕೆ ಕುರಿತು, ನಾನು ಉತ್ತರಿಸುವುದಿಲ್ಲ. ಕೊಚ್ಚೆಗುಂಡಿಗೆ ಕಲ್ಲು ಎಸೆದು ನನ್ನ ಶುಭ್ರ ಬಟ್ಟೆಯನ್ನು ಕೊಳಕು ಮಾಡಿಕೊಳ್ಳುವುದಕ್ಕೆ ಇಷ್ಟವಿಲ್ಲವೆಂದು ಟಾಂಗ್ ನೀಡಿದರು.