ಮೈಸೂರು: ರಾಜೀನಾಮೆ ನೀಡಲು 25 ಕೋಟಿ ರೂ ಹಣ ಪಡೆದಿದ್ದಾರೆ ಎಂಬ ಸಾ.ರಾ.ಮಹೇಶ್ ಆರೋಪ ಸುಳ್ಳು. ನಾನು ಈ ಕುರಿತಂತೆ ಯಾವುದೇ ಆಣೆ - ಪ್ರಮಾಣ ಮಾಡುವುದಿಲ್ಲ ಎಂದು ಅನರ್ಹ ಶಾಸಕ ಹೆಚ್.ವಿಶ್ವನಾಥ್ ಸ್ಪಷ್ಟಪಡಿಸಿದ್ದಾರೆ.
ಅನರ್ಹ ಶಾಸಕ ಹೆಚ್.ವಿಶ್ವನಾಥ್ ಹಾಗೂ ಶಾಸಕ ಸಾ.ರಾ.ಮಹೇಶ್ ಇಬ್ಬರೂ ಇಂದು ಚಾಮುಂಡಿ ಬೆಟ್ಟಕ್ಕೆ ಬಂದಿದ್ದು, ಮಾಧ್ಯಮಗಳೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಹೆಚ್.ವಿಶ್ವನಾಥ್ ನಾನು ಯಾವುದೇ ಹಣ ಪಡೆದಿಲ್ಲ ಎಂದು ಚಾಮುಂಡಿ ಬೆಟ್ಟಕ್ಕೆ ಬಂದು ಆಣೆ ಮಾಡಿದರೆ, ನಾನು ರಾಜ್ಯದ ಜನರ ಕ್ಷಮೆ ಕೇಳುತ್ತೇನೆ ಎಂದು ಶಾಸಕ ಸಾ.ರಾ.ಮಹೇಶ್ ಹಾಕಿದ್ದ ಸವಾಲಿಗೆ ಅನರ್ಹ ಶಾಸಕ ಹೆಚ್. ವಿಶ್ವನಾಥ್ ಚಾಮುಂಡಿ ಬೆಟ್ಟಕ್ಕೆ ಬಂದಿದ್ದು, ಆಣೆಪ್ರಮಾಣಕ್ಕೆ ವೇದಿಕೆ ಸಿದ್ಧವಾಗಿತ್ತು. ಆದರೆ ಈ ಕುರಿತಂತೆ ಅನರ್ಹ ಶಾಸಕ ಹೆಚ್.ವಿಶ್ವನಾಥ್ ನಾನು ಸತ್ಯ, ಪ್ರಮಾಣ ಮಾಡುವುದಿಲ್ಲ. ನನಗೆ 25 ಕೋಟಿ ರೂ ನೀಡಿದ ಆ ವ್ಯಕ್ತಿ ಯಾರು ಎಂದು ಸಾ.ರಾ.ಮಹೇಶ್ ಚಾಮುಂಡಿ ಬೆಟ್ಟಕ್ಕೆ ಕರೆದುಕೊಂಡು ಬಂದರೆ ನಾನು ಈ ಆರೋಪವನ್ನು ಒಪ್ಪಿಕೊಳ್ಳುತ್ತೇನೆ ಎಂದು ಹೆಚ್. ವಿಶ್ವನಾಥ್ ಹೇಳಿದ್ದಾರೆ.
ಇದಕ್ಕೆ ಸಾ.ರಾ.ಮಹೇಶ್ ಪ್ರತಿಕ್ರಿಯಿಸಿ, ನಾನಾಗಲಿ ನನ್ನ ಕುಟುಂಬದವರಾಗಲಿ ಹಣ ಅಥವಾ ಇತರ ಆಮಿಷಗಳಿಗೆ ಒಳಗಾಗಿಲ್ಲ ಎಂದು ಹೆಚ್.ವಿಶ್ವನಾಥ್ ಪ್ರಮಾಣ ಮಾಡಲಿ ಎಂದು ಪಟ್ಟು ಹಿಡಿದಿದ್ದರು.
ಮುಖಾಮುಖಿ ಭೇಟಿಯಾಗದ ಶಾಸಕರು: