ಮೈಸೂರು: ಹೆಚ್.ಡಿ. ಕೋಟೆ ತಾಲೂಕಿನ ಬೀಚನಹಳ್ಳಿ ಗ್ರಾಮದಲ್ಲಿರುವ ಕಬಿನಿ ಜಲಾಶಯಕ್ಕೆ ಬಸವರಾಜ ಬೊಮ್ಮಾಯಿ ಬಾಗಿನ ಅರ್ಪಿಸಲು ಬರುತ್ತಿದ್ದ ವೇಳೆ ಸಿಎಂ ಕಾರನ್ನು ವ್ಯಕ್ತಿಯೋರ್ವ ತಡೆಯಲು ಮುಂದಾದ ಘಟನೆ ನಡೆದಿದೆ.
ಸಿಎಂ ಬಸವರಾಜ ಬೊಮ್ಮಾಯಿ ಕಾರು ತಡೆಗೆ ಯತ್ನ - ಕಬಿನಿ ಜಲಾಶಯನಕ್ಕೆ ಬಾಗಿನ ಅರ್ಪಿಸಿದ ಸಿಎಂ
ಹೆಚ್.ಡಿ. ಕೋಟೆ ತಾಲೂಕು ಘಟಕದ ಅಧ್ಯಕ್ಷ ಗುರುಸ್ವಾಮಿ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾರನ್ನು ತಡೆಯಲು ಯತ್ನಿಸಿದರು.
ಬೊಮ್ಮಾಯಿ ಕಾರು ತಡೆಗೆ ಯತ್ನ
ಹೆಚ್.ಡಿ.ಕೋಟೆ ತಾಲೂಕು ಘಟಕದ ಅಧ್ಯಕ್ಷ ಗುರುಸ್ವಾಮಿ ಅವರು ಮುಖ್ಯಮಂತ್ರಿ ಕಾರನ್ನು ತಡೆಯಲು ಯತ್ನಿಸಿದ ವ್ಯಕ್ತಿ. ಸಿಎಂ ಭೇಟಿಗೆ ಅವಕಾಶ ನಿರಾಕರಿಸಿದ ಹಿನ್ನೆಲೆಯಲ್ಲಿ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಹೀಗೆ ಮಾಡಿದರು ಎಂದು ತಿಳಿದುಬಂದಿದೆ.
ಬಳಿಕ ಗೆಸ್ಟ್ಹೌಸ್ನಲ್ಲಿ ಭೇಟಿ ಮಾಡುವಂತೆ ಗುರುಸ್ವಾಮಿಗೆ ಸಿಎಂ ಹೇಳಿ ಹೊರಟರು.