ಮೈಸೂರು: ಗುಂಡ್ಲುಪೇಟೆಯಲ್ಲಿ ಉದ್ಯಮಿವೋರ್ವ ತನ್ನ ಕುಟುಂಬಸ್ಥರಿಗೆ ಗುಂಡಿಕ್ಕಿ ಬಳಿಕ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಖಾಸಗಿ ಮ್ಯಾನ್ಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಕುಟುಂಬಸ್ಥರಿಗೆ ಗುಂಡಿಕ್ಕಿ ಉದ್ಯಮಿ ಆತ್ಮಹತ್ಯೆ ಕೇಸ್: ಮೂವರು ಗನ್ಮ್ಯಾನ್ಗಳ ವಿಚಾರಣೆ - ಗುಂಡ್ಲುಪೇಟೆ ಆತ್ಮಹತ್ಯೆ ಪ್ರಕರಣ
ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಗುಂಡ್ಲುಪೇಟೆಯಲ್ಲಿ ಐವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಚುರುಕುಗೊಂಡಿದ್ದು, ಮೂವರು ಖಾಸಗಿ ಗನ್ಮ್ಯಾನ್ಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
![ಕುಟುಂಬಸ್ಥರಿಗೆ ಗುಂಡಿಕ್ಕಿ ಉದ್ಯಮಿ ಆತ್ಮಹತ್ಯೆ ಕೇಸ್: ಮೂವರು ಗನ್ಮ್ಯಾನ್ಗಳ ವಿಚಾರಣೆ](https://etvbharatimages.akamaized.net/etvbharat/prod-images/768-512-4159256-thumbnail-3x2-vis.jpg)
ಗುಂಡ್ಲುಪೇಟೆ ಆತ್ಮಹತ್ಯೆ ಪ್ರಕರಣ
ಘಟನೆ ನಡೆದ ಬಳಿಕ ಸೂಕ್ತ ತನಿಖೆ ಮಾಡುವಂತೆ ಮೃತ ಓಂ ಪ್ರಕಾಶ್ ಅವರ ಮಾವ ಶಾಂತರಾಮ್ ಚಾಮರಾಜನಗರ ಎಸ್ಪಿ ಕಚೇರಿಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನ ಅನ್ವಯ ಈ ಪ್ರಕರಣವನ್ನು ತನಿಖೆ ಮಾಡಲು ಡಿವೈಎಸ್ಪಿ, ಜಿ. ಮೋಹನ್ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿದೆ.
ಗುಂಡ್ಲುಪೇಟೆ ಆತ್ಮಹತ್ಯೆ ಪ್ರಕರಣ
ಮೃತ ಓಂಪ್ರಕಾಶ್ ಬಳಸುತ್ತಿದ್ದ ದೂರವಾಣಿ ಸಂಖ್ಯೆಯ ಕಾಲ್ ಲಿಸ್ಟ್ ಪಡೆದು ಮತ್ತು ಖಾಸಗಿ ಗನ್ ಮ್ಯಾನ್ಗಳನ್ನು ಇಟ್ಟುಕೊಳ್ಳಲು ಇವರಿಗೆ ಯಾರಿಂದಲಾದ್ರೂ ಜೀವ ಭಯವಿತ್ತೆ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Last Updated : Aug 17, 2019, 1:40 PM IST