ಕರ್ನಾಟಕ

karnataka

ETV Bharat / city

ಗುಣಾಂಬ ಟ್ರಸ್ಟ್ ಆಸ್ತಿ ವಿವಾದ : ಮುಡಾ ಆಯುಕ್ತರಿಂದ ಬಾಡಿಗೆದಾರರಿಗೆ ಅವಮಾನ ಆರೋಪ - ಗುಣಾಂಬ ಟ್ರಸ್ಟ್ ಆಸ್ತಿ ವಿವಾದ

ಈ‌‌ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿದ ಅತಾವುಲ್ಲಾ ಖಾನ್, ಮಹಾರಾಜರ ಕಾಲದಲ್ಲಿ ಗುಣಾಂಬ ಟ್ರಸ್ಟ್ ಜಾಗ ಗರ್ಭಿಣಿಯರ ಆರೈಕೆ ಕೇಂದ್ರವಾಗಿತ್ತು. ಮೈಸೂರು ರಾಜವಂಶಸ್ಥರು ಮಾತ್ರ ನಮ್ಮನ್ನು ಪ್ರಶ್ನಿಸಬಹುದು. ಈ ಆಸ್ತಿ ರಕ್ಷಣೆ ಮಾಡುತ್ತಿರುವುದರಿಂದ ನಮ್ಮನ್ನು ಇರಲು ರಾಜಮನೆತನದವರೇ ಬಿಟ್ಟಿದ್ದಾರೆ..

Mysuru
ಮುಡಾ ಆಯುಕ್ತರಿಂದ ಬಾಡಿಗೆದಾರರಿಗೆ ಅವಮಾನ ಆರೋಪ

By

Published : Jun 23, 2021, 2:43 PM IST

ಮೈಸೂರು :ಗುಣಾಂಬ ಟ್ರಸ್ಟ್ ಆಸ್ತಿ ವಿವಾದ ವಿಚಾರವಾಗಿ ಮುಡಾ ಆಯುಕ್ತರು ನಮ್ಮೊಂದಿಗೆ ಪಾಕಿಸ್ತಾನದ ಹೆಸರು ಥಳಕು ಹಾಕಿ ಅವಮಾನಿಸಿದ್ದಾರೆಂದು ಬಾಡಿಗೆದಾರರು ಆರೋಪ ಮಾಡಿದ್ದಾರೆ.

ನಗರದ ದಿವಾನ್​ ರಸ್ತೆಯಲ್ಲಿರುವ ಗುಣಾಂಬ ಟ್ರಸ್ಟ್ ಜಾಗದಲ್ಲಿ 40 ವರ್ಷಗಳಿಂದ ಬಾಡಿಗೆ ಆಧಾರದ ಮೇಲೆ ಅತಾವುಲ್ಲಾ ಖಾನ್ ಎಂಬುವರು ಗ್ಯಾರೇಜ್ ನಡೆಸುತ್ತಿದ್ದಾರೆ. ವಾರದ ಹಿಂದೆ ಟ್ರಸ್ಟ್​ ಸ್ಥಳಕ್ಕೆ ದಿಢೀರ್ ಭೇಟಿ ನೀಡಿದ ಮುಡಾ ಆಯುಕ್ತ ಹೆಚ್‌ ಬಿ ನಟೇಶ್, ಈ ಜಾಗ ಮುಡಾಗೆ ಸೇರಿದೆಂದು ಬಾಡಿಗೆದಾರರು ಹಾಗೂ ಬಾಡಿಗೆದಾರರ ಪರ ವಕೀಲರೊಂದಿಗೆ ವಾದ ಮಾಡಿದ್ದಾರೆ.

ಮುಡಾ ಆಯುಕ್ತರಿಂದ ಬಾಡಿಗೆದಾರರಿಗೆ ಅವಮಾನ ಆರೋಪ

ಈ ವೇಳೆ ಬಾಡಿಗೆದಾರರ ಪರ ವಕೀಲ ಸೈಯದ್ ಅಮೀರ್, ಗುಣಾಂಬ ಟ್ರಸ್ಟ್ ಆಸ್ತಿ ಪ್ರಕರಣದ ಬಗ್ಗೆ ಕೋರ್ಟ್​ನಲ್ಲಿ​ ವ್ಯಾಜ್ಯ ನಡೆಯುತ್ತಿದೆ. ತೀರ್ಪು ಬಂದ ಮೇಲೆ ನಾವು ಅದಕ್ಕೆ ಬದ್ಧರಾಗಿರುತ್ತೇವೆ. ಅಲ್ಲಿಯವರೆಗೂ ಬಾಡಿಗೆದಾರರು ಇದೇ ಜಾಗದಲ್ಲಿ ವ್ಯವಹಾರ ನಡೆಸುತ್ತಾರೆ ಎಂದರು. ಇದನ್ನೊಪ್ಪದ ಆಯುಕ್ತರು, ಇದು ಪಾಕಿಸ್ತಾನವಲ್ಲ ಅಂತ ಬಾಡಿಗೆದಾರರಿಗೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಈ‌‌ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿದ ಅತಾವುಲ್ಲಾ ಖಾನ್, ಮಹಾರಾಜರ ಕಾಲದಲ್ಲಿ ಗುಣಾಂಬ ಟ್ರಸ್ಟ್ ಜಾಗ ಗರ್ಭಿಣಿಯರ ಆರೈಕೆ ಕೇಂದ್ರವಾಗಿತ್ತು. ಮೈಸೂರು ರಾಜವಂಶಸ್ಥರು ಮಾತ್ರ ನಮ್ಮನ್ನು ಪ್ರಶ್ನಿಸಬಹುದು. ಈ ಆಸ್ತಿ ರಕ್ಷಣೆ ಮಾಡುತ್ತಿರುವುದರಿಂದ ನಮ್ಮನ್ನು ಇರಲು ರಾಜಮನೆತನದವರೇ ಬಿಟ್ಟಿದ್ದಾರೆ.

ಮುಡಾ ಆಸ್ತಿಗೂ, ಈ ಟ್ರಸ್ಟ್​ಗೂ ಸಂಬಂಧವಿಲ್ಲ. ನಾನು ಭಾರತೀಯ, ನಮ್ಮೊಂದಿಗೆ ಪಾಕಿಸ್ತಾನದ ಹೆಸರು ಥಳಕು ಹಾಕಿ ಆಯುಕ್ತರು ಅವಮಾನಿಸಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು. ಅತಾವುಲ್ಲಾ ಖಾನ್ ಸಹೋದರ ಅಬ್ದುಲ್ ಪಾಷ ಮಾತನಾಡಿ, ಮುಡಾ ಆಯುಕ್ತರು ನಿಂದನೆ ಮಾಡಿರುವುದರಿಂದ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗಿದೆ ಎಂದರು.

ಇದನ್ನೂ ಓದಿ:ಬಂಧುಗಳ ಬಲಿ ಪಡೆದ ಕೋವಿಡ್‌: ಖಿನ್ನತೆಯಿಂದ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ

ABOUT THE AUTHOR

...view details