ಕರ್ನಾಟಕ

karnataka

ETV Bharat / city

Mysuru Dasara: ನಾಡಹಬ್ಬ ದಸರಾಗೆ ಸರ್ಕಾರದ ಮಾರ್ಗಸೂಚಿ ಹೀಗಿದೆ.. - ಐತಿಹಾಸಿಕ ಜಂಬೂ ಸವಾರಿ

ವಿಶ್ವವಿಖ್ಯಾತ ನಾಡಹಬ್ಬ ದಸರಾಗೆ ರಾಜ್ಯ ಸರ್ಕಾರ ಮಾರ್ಗಸೂಚಿ ಹೊರಡಿಸಿದ್ದು, ಅತಿ ಕಡಿಮೆ ಮಂದಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ.

Guidelines to mysuru dasara festival
ನಾಡಹಬ್ಬ ದಸರಾಗೆ ಮಾರ್ಗಸೂಚಿ ಹೊರಡಿಸಿದ ರಾಜ್ಯ ಸರ್ಕಾರ

By

Published : Oct 5, 2021, 12:38 PM IST

Updated : Oct 5, 2021, 4:10 PM IST

ಮೈಸೂರು/ ಬೆಂಗಳಳೂರು:ಮೈಸೂರು ದಸರಾ ಹಬ್ಬ ಆಚರಣೆಗೆ ಕೋವಿಡ್ ನಿಯಮಾವಳಿ ರೂಪಿಸಿ ಸರ್ಕಾರ ಆದೇಶ ಹೊರಡಿಸಿದೆ. ಅದೇ ರೀತಿ ರಾಜ್ಯಾದ್ಯಂತ ನಾಡಹಬ್ಬ ದಸರಾ ಹಾಗೂ ದುರ್ಗಾ ಪೂಜೆ ಆಚರಣೆ ಸಂಬಂಧ ಮಾರ್ಗಸೂಚಿ ಹೊರಡಿಸಿದೆ.

ಮೈಸೂರು ದಸಾರ ಮತ್ತು ರಾಜ್ಯದ ಇತರಡೆ ಆಚರಿಸುವ ಸಂಬಂಧ ಎರಡು ಪ್ರತ್ಯೇಕ ಮಾರ್ಗಸೂಚಿ ಹೊರಡಿಸಾಗಿದೆ. ಕೋವಿಡ್-19 ಮೈರಾಣು ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರಸಕ್ತ ವರ್ಷದ ನಾಡಹಬ್ಬ ದಸರಾವನ್ನು ಅತ್ಯಂತ ಸರಳವಾಗಿ ಮತ್ತು ಭಕ್ತಿ ಪೂರ್ವಕವಾಗಿ ಆಚರಿಸಲು ಸೂಚಿಸಲಾಗಿದೆ.

ಮೈಸೂರು ದಸರಾ ಮಾರ್ಗಸೂಚಿ:

  • ಚಾಮುಂಡಿ ಬೆಟ್ಟದಲ್ಲಿ ನೆಡೆಯುವ ಚಾಮುಂಡೇಶ್ವರಿ ಪೂಜೆಗೆ 100 ಜನರಿಗೆ ಅವಕಾಶ
  • ದಸರಾ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ 500 ಜನರ ಮಿತಿ ನಿಗದಿ. ಪ್ರತಿ ದಿನ ಎರಡು ತಾಸುಗಳಿಗೆ ಸೀಮಿತವಾಗಿ ಸ್ಥಳೀಯ ಕಲಾವಿದರಿಂದ ಕಾರ್ಯಕ್ರಮ
  • ಹೊರಗಿನಿಂದ ಬರುವವರು ಆರ್ ಟಿಪಿಸಿಆರ್ ಟೆಸ್ಟ್ ಹಾಗೂ ಕೋವಿಡ್ ಲಸಿಕೆ ಪಡೆದಿರಬೇಕು
  • ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸಬೇಕು.ತಪ್ಪಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲು ಮೈಸೂರು ಮತ್ತು ಇತರೆ ಜಿಲ್ಲಾಡಳಿತಕ್ಕೆ ಸೂಚನೆ
  • ಆಚರಣೆಯಲ್ಲಿ ಭಾಗವಹಿಸುವಂತಹ ಪ್ರತಿಯೊಬ್ಬರ ಕರ್ತವ್ಯ ನಿರತ ಅಧಿಕಾರಿಗಳು/ ಸಿಬ್ಬಂದಿಗಳು/ ಕಲಾವಿದರು, ರಕ್ಷಣಾ ಸಿಬ್ಬಂದಿಗಳು ಮತ್ತು ಮಾಧ್ಯಮದವರು ಅ.4ರ ನಂತರ ಕೋವಿಡ್-19 RTPCR ತಪಾಸಣೆ ನಡೆಸಿ ಸೋಂಕು ಇಲ್ಲದಿರುವ ಬಗ್ಗೆ ಪ್ರಮಾಣ ಪತ್ರ ಮತ್ತು ಕನಿಷ್ಠ ಒಂದು ಡೋಸ್ ಕೋವಿಡ್-19 ಲಸಿಕೆ ಪಡೆದಿರುವುದನ್ನು ಕಡ್ಡಾಯ ಗೊಳಿಸಲಾಗಿದೆ.
  • ಕಲಾವಿದರು ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ವೃಂದದವರು ಕಡ್ಡಾಯವಾಗಿ ಮೈಸೂರು ಮತ್ತು ರಾಜ್ಯದ ಇತರ ಜಿಲ್ಲೆಗಳಿಂದ ಬಂದವರಿಗೆ ಮಾತ್ರ ಆದ್ಯತೆ ನೀಡಬೇಕು
  • ಜಂಬೂ ಸವಾರಿ/ಪಂಜಿನ ಕವಾಯತನ್ನು ಎಲ್ಲ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಕಡ್ಡಾಯವಾಗಿ 500 ಜನರಿಗೆ ಮಾತ್ರ ಸೀಮಿತಗೊಳಿಸಿಬೇಕು
ನಾಡಹಬ್ಬ ದಸರಾಗೆ ಸರ್ಕಾರದ ಮಾರ್ಗಸೂಚಿ ಹೀಗಿದೆ

ರಾಜ್ಯದ ಇತರೆಡೆಗೆ ಮಾರ್ಗಸೂಚಿ

  • ರಾಜ್ಯದ ಇತರೆಡೆ ನಡೆಸಲಾಗುವ ದಸರಾ ಆಚರಣೆಯ ಕಾರ್ಯಕ್ರಮಗಳಲ್ಲಿ 400 ಕ್ಕಿಂತ ಹೆಚ್ಚು ಜನರು ಒಮ್ಮೆಲೆ ಸೇರುವಂತಿಲ್ಲ
  • ನಾಡಹಬ್ಬ ದಸರಾ ಆಚರಣೆಯಲ್ಲಿ ಸಾಮಾಜಿಕ ಅಂತರವಿಲ್ಲದೆ ನಡೆಸಲಾಗುವ ಕಾರ್ಯಕ್ರಮಗಳನ್ನು ನಿಷೇಧಿಸಲಾಗಿದೆ
  • ಕೋವಿಡ್-19 ಕಾಮಿಕ ಸೋಂಕು ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಷ್ಟ್ರೀಯ ವಿರ್ದೇಶನಗಳನ್ನು ಹಾಗೂ ರಾಜ್ಯ ಸರ್ಕಾರವು ಹೊರಡಿಸಿದ ಮಾರ್ಗಸೂಚಿಗಳನ್ನು ತಪ್ಪದೇ ಕಟ್ಟುನಿಟ್ಟಾಗಿ ಪಾಲಿಸಬೇಕು
  • ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಮಹಾನಗರ ಪಾಲಿಕೆ, ಅಗ್ನಿಶಾಮಕ ಇಲಾಖೆ, ಜಿಲ್ಲಾಡಳಿತ ಹಾಗೂ ಸ್ಥಳೀಯ ಸಂಸ್ಥೆ ಪ್ರಾಧಿಕಾರಗಳಿಂದ ಹೊರರಿಸಲಾಗುವ ಎಲ್ಲಾ ಅದೇಶ / ನಿರ್ದೇಶನ ಹಾಗೂ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು
Last Updated : Oct 5, 2021, 4:10 PM IST

ABOUT THE AUTHOR

...view details