ಮೈಸೂರು:ದಸರಾಗೆ ಕ್ಷಣಗಣನೆ ಆರಂಭವಾಗಿದ್ದು ಸಾಂಸ್ಕೃತಿಕ ನಗರಿಯಲ್ಲಿ ಸಕಲ ಸಿದ್ಧತೆಗಳು ನಡೆಯುತ್ತಿವೆ. ದಸರಾ ಅಂಗವಾಗಿ ಮಾನಸ ಗಂಗೋತ್ರಿ ಬಯಲು ರಂಗಮಂದಿರದಲ್ಲಿ ಇಂದಿನಿಂದ 10 ದಿನಗಳ ಕಾಲ ನಡೆಯುವ ಯುವ ಸಂಭ್ರಮಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ದೀಪ ಬೆಳಗುವುದರ ಮೂಲಕ ಚಾಲನೆ ನೀಡಿದರು.
ಯುವ ಸಂಭ್ರಮಕ್ಕೆ ಚಾಲನೆ ನೀಡಿದ ಗೋಲ್ಡನ್ ಸ್ಟಾರ್... ಡೈಲಾಗ್ ಹೇಳಿ ರಂಜಿಸಿದ ಗಣೇಶ್ - ಗೀತಾ
ದಸರಾ ಅಂಗವಾಗಿ ಪ್ರತಿವರ್ಷ ಏರ್ಪಡಿಸಲಾಗುವ ಯುವಸಂಭ್ರಮವನ್ನು ಗೋಲ್ಡನ್ ಸ್ಟಾರ್ ಗಣೇಶ್ ಇಂದು ಉದ್ಘಾಟಿಸಿದರು. ಈ ಯುವ ಸಂಭ್ರಮವನ್ನು ಉದ್ಘಾಟಿಸಿದ್ದು ಬಹಳ ಖುಷಿಯಾಗಿದೆ ಎಂದು ಗಣೇಶ್ ತಮ್ಮ ಸಂತೋಷ ಹಂಚಿಕೊಂಡಿದ್ದಾರೆ.
ಗೋಲ್ಡನ್ ಸ್ಟಾರ್ ಗಣೇಶ್
ಇಂದಿನಿಂದ ಸುಮಾರು 250 ವಿವಿಧ ಕಾಲೇಜಿನಿಂದ ಆಗಮಿಸುವ ತಂಡಗಳು ಯುವ ಸಂಭ್ರಮದಲ್ಲಿ ತಮ್ಮ ಪ್ರತಿಭೆ ತೋರಲಿದ್ದು ಇಂತಹ ಯುವ ಸಂಭ್ರಮವನ್ನು ಉದ್ಘಾಟನೆ ಮಾಡುತ್ತಿರುವುದು ಖುಷಿ ತಂದಿದೆ ಎಂದು ಗೊಲ್ಡನ್ ಸ್ಟಾರ್ ಗಣೇಶ್ ತಿಳಿಸಿದರು. ಇದೇ ವೇದಿಕೆಯಲ್ಲಿ ತಮ್ಮ ಅಭಿನಯದ 'ಗೀತಾ' ಚಿತ್ರದ ಟ್ರೇಲರನ್ನು ಮತ್ತೊಮ್ಮೆ ಬಿಡುಗಡೆ ಮಾಡಿದರು. ಅಭಿಮಾನಿಗಳ ಒತ್ತಾಯದ ಮೇರೆಗೆ ತಮ್ಮ ಸಿನಿಮಾದ ಡೈಲಾಗ್ ಹೇಳಿ ಎಲ್ಲರನ್ನೂ ರಂಜಿಸಿದರು. ಕಾರ್ಯಕ್ರಮಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಹಾಗೂ ಸ್ಥಳೀಯ ಶಾಸಕರು ಭಾಗವಹಿಸಿದ್ದರು.