ಕರ್ನಾಟಕ

karnataka

ETV Bharat / city

ಆಟವಾಡುವಾಗ ಕಾಲು ಜಾರಿ ಸಂಪ್‌ನೊಳಗೆ ಬಿದ್ದು ಬಾಲಕಿ ಸಾವು - motta village girl child died death

ಪೋಷಕರು ಹೊಸದಾಗಿ ಮನೆ ಕಟ್ಟುತ್ತಿದ್ದಾರೆ. ಅದಕ್ಕಾಗಿ ನೀರಿನ ಸಂಪ್ ನಿರ್ಮಿಸಿದ್ದಾರೆ. ಇದೇ ಸಂಪ್‌ನ ಬಳಿ ಆಟವಾಡ್ತಿದ್ದ ಬಾಲಕಿ ಬಿದ್ದಿದ್ದಾಳೆ..

girl-child-death-by-drowning-inside-a-tank
ಬಾಲಕಿ ಸಾವು

By

Published : Jul 13, 2020, 9:49 PM IST

ಮೈಸೂರು:ಬಾಲಕಿಯೊಬ್ಬಳು ಆಟವಾಡುತ್ತಾ ನೀರಿನ ಸಂಪ್​ನೊಳಗೆ ಬಿದ್ದು ಸಾವಿಗೀಡಾಗಿರುವ ಘಟನೆ ಹೆಚ್ ಡಿ ಕೋಟೆ ತಾಲೂಕಿನ ಮೊತ್ತ ಗ್ರಾಮದಲ್ಲಿ ನಡೆದಿದೆ.

ಸಂಪ್‌ನೊಳಗೆ ಮುಳುಗಿ ಬಾಲಕಿ ಸಾವು

ಹೆಚ್ ಡಿ ಕೋಟೆ ತಾಲೂಕಿನ ಮೊತ್ತ ಗ್ರಾಮದ ಮಹೇಶ್ ಎಂಬುವರ ಪುತ್ರಿ ಛಾಯಾ(3) ಸಾವಿಗೀಡಾದ ಬಾಲಕಿ. ಈಕೆಯ ಪೋಷಕರು ಹೊಸದಾಗಿ ಮನೆ ಕಟ್ಟುತ್ತಿದ್ದು, ನೀರಿನ ಸಂಪ್ ನಿರ್ಮಿಸಲಾಗಿತ್ತು.

ಇದರ ಬಗ್ಗೆ ಅರಿವಿರದ ಬಾಲಕಿ ಸಂಪ್​ನೊಳಗೆ ಮುಳುಗಿ ಅಸುನೀಗಿದ್ದಾಳೆ. ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆ ಸಂಬಂಧ ಹೆಚ್ ಡಿ ಕೋಟೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details