ಮೈಸೂರು: ಮಗನ ಸಾವಿನ ಸುದ್ದಿ ತಿಳಿಯದೇ ಸಿದ್ಧಾರ್ಥ್ ತಂದೆ ಮೈಸೂರಿನ ಸ್ನೇಹಿತರ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.
ಸಿದ್ಧಾರ್ಥ್ ಸಾವಿನ ಸುದ್ದಿ ತಿಳಿಯದ ತಂದೆ: ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ - coffee day owner siddharth latest news
ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಅವರ ತಂದೆ ಗಂಗಯ್ಯ ಹೆಗಡೆ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು, ಅವರನ್ನು ನಗರದ ಗೋಪಾಲಗೌಡ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ದುರದೃಷ್ಟವೆಂದರೆ ಮಗ ಸಿದ್ದಾರ್ಥ್ ಸಾವಿನ ವಿಚಾರವನ್ನು ಗಂಗಯ್ಯ ಹೆಗಡೆಯವರಿಗೆ ಇನ್ನೂ ತಿಳಿಸಲಾಗಿಲ್ಲ ಎನ್ನಲಾಗಿದೆ.
![ಸಿದ್ಧಾರ್ಥ್ ಸಾವಿನ ಸುದ್ದಿ ತಿಳಿಯದ ತಂದೆ: ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ](https://etvbharatimages.akamaized.net/etvbharat/prod-images/768-512-3998879-thumbnail-3x2-lek.jpg)
ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಅವರ ತಂದೆ ಗಂಗಯ್ಯ ಹೆಗಡೆ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು, ಅವರನ್ನು ನಗರದ ಗೋಪಾಲಗೌಡ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ದುರದೃಷ್ಟವೆಂದರೆ ಮಗ ಸಿದ್ಧಾರ್ಥ್ ಸಾವಿನ ವಿಚಾರವನ್ನು ಗಂಗಯ್ಯ ಹೆಗಡೆಯವರಿಗೆ ಇನ್ನೂ ತಿಳಿಸಲಾಗಿಲ್ಲ ಎನ್ನಲಾಗಿದೆ.
ಇನ್ನು ತಮ್ಮ ಗಂಡನನ್ನು ನೋಡಿಕೊಳ್ಳುತ್ತಿದ್ದ ಸಿದ್ಧಾರ್ಥ್ ಅವರ ತಾಯಿ ವಾಸಂತಿ ಹೆಗಡೆ ಮಗನ ವಿಚಾರ ತಿಳಿದು ನಿನ್ನೆಯೇ ಚಿಕ್ಕಮಗಳೂರಿನ ಚೇತನಹಳ್ಳಿಗೆ ತೆರಳಿದ್ದಾರೆ. ಇನ್ನು ಗಂಗಯ್ಯ ಅವರ ಚಿಕಿತ್ಸೆಯ ಬಗ್ಗೆ ಆಸ್ಪತ್ರೆಯವರಿಗೆ ಕೇಳಿದಾಗ ಈ ಕುರಿತು ಯಾವುದೇ ಮಾಹಿತಿ ನೀಡಲು ನಿರಾಕರಿಸಿದ್ದಾರೆ ಎನ್ನಲಾಗಿದೆ.