ಕರ್ನಾಟಕ

karnataka

ETV Bharat / city

ದಸರಾ ಮಹೋತ್ಸವದಲ್ಲಿ ಭಾಗವಹಿಸುವ ಗಜಪಡೆ ಯಾವುವು?: ಇಲ್ಲಿದೆ ಪಟ್ಟಿ - ದಸರಾ

ದಸರಾ ಮಹೋತ್ಸವದಲ್ಲಿ ಭಾಗವಹಿಸುವ ಆನೆಯ ಪಟ್ಟಿಯನ್ನು ಮೈಸೂರು ವನ್ಯಜೀವಿ ವಿಭಾಗ ಬಿಡುಗಡೆ ಮಾಡಿದೆ.

gajapade-participating-in-dasara
ದಸರಾ ಮಹೋತ್ಸವದಲ್ಲಿ ಭಾಗವಹಿಸುವ ಗಜಪಡೆ ಯಾವುವು

By

Published : Aug 5, 2022, 9:59 PM IST

ಮೈಸೂರು: ಈ ಬಾರಿ ನಾಡಹಬ್ಬ ದಸರಾ ಮಹೋತ್ಸವದಲ್ಲಿ 14 ಆನೆಗಳು ಭಾಗವಹಿಸಲಿದ್ದು ಈ ಪೈಕಿ 10 ಗಂಡು ಆನೆಗಳು, 4 ಹೆಣ್ಣು ಆನೆಗಳಿರಲಿವೆ. ಅಭಿಮನ್ಯು ಸಾರಥ್ಯವಿರಲಿದೆ.

ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಮತ್ತಿಗೂಡು ಆನೆ ಶಿಬಿರದಿಂದ ಅಭಿಮನ್ಯು (57 ವರ್ಷ), ಭೀಮ(22 ವರ್ಷ), ಮಹೇಂದ್ರ(39 ವರ್ಷ), ಗೋಪಾಲಸ್ವಾಮಿ (39 ವರ್ಷ). ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಬಳ್ಳೆ ಆನೆ ಶಿಬಿರದಿಂದ ಅರ್ಜುನ(63 ವರ್ಷ). ಮಡಿಕೇರಿಯ ದುಬಾರಿ ಆನೆ ಶಿಬಿರದಿಂದ ವಿಕ್ರಮ(59ವರ್ಷ), ಧನಂಜಯ(44 ವರ್ಷ), ಕಾವೇರಿ (45 ವರ್ಷ), ಗೋಪಿ (41 ವರ್ಷ), ಶ್ರೀರಾಮ(40 ವರ್ಷ), ವಿಜಯ(63 ವರ್ಷ) ಆನೆಗಳು ಇರಲಿವೆ.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ರಾಮಪುರ ಆನೆ ಶಿಬಿರದಿಂದ ಚೈತ್ರ (49 ವರ್ಷ), ಲಕ್ಷ್ಮಿ(21 ವರ್ಷ) ಹಾಗೂ ಪಾರ್ಥ ಸಾರಥಿ (18 ವರ್ಷ) ಆನೆಗಳು ಆಯ್ಕೆಯಾಗಿವೆ ಎಂದು ಮೈಸೂರು ವನ್ಯಜೀವಿ ವಿಭಾಗ ಆನೆಗಳ ಪಟ್ಟಿ ಬಿಡುಗಡೆ ಮಾಡಿದೆ.

ಇದನ್ನೂ ಓದಿ:ರಾಜ್ಯದ ದೇಗುಲಗಳಲ್ಲಿ ಮಹಿಳೆಯರಿಗೆ ಅರಿಶಿನ-ಕುಂಕುಮ, ಹಸಿರು ಬಳೆ ವಿತರಣೆ

ABOUT THE AUTHOR

...view details