ಮೈಸೂರು:ನಾನು ರಾಜಕಾರಣದಲ್ಲಿ ಯಾವುದೇ ಗೇಮ್ ಪ್ಲಾನ್ ಇಟ್ಟುಕೊಂಡು ಮುಂದೆ ಒಂದು ಹಿಂದೆ ಒಂದು ಹೇಳುವುದಿಲ್ಲ, ನನಗೆ ಕ್ರಿಮಿನಲ್ ಮೈಂಡ್ ಇಲ್ಲ, ಇದ್ದುದ್ದನ್ನು ಇದ್ದ ಹಾಗೇ ಹೇಳುತ್ತೇನೆ ಎಂದು ಶಾಸಕ ಜಿ. ಟಿ. ದೇವೇಗೌಡ ಪರೋಕ್ಷವಾಗಿ ಸಾ. ರಾ. ಮಹೇಶ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಾನು ಇದ್ದದ್ದು ಇದ್ದಂಗೆ ಹೇಳುತ್ತೇನೆ, ಕ್ರಿಮಿನಲ್ ಮೈಂಡ್ ಇಲ್ಲ: ಪರೋಕ್ಷವಾಗಿ ಸಾರಾಗೆ ತಿವಿದ ಜಿಟಿಡಿ - ಸಾ ರಾ ಮಹೇಶ್ ಕುರಿತು ಜಿ ಟಿ ದೇವೇಗೌಡ ಹೇಳಿಕೆ
18 ರಂದು ನಡೆಯಲಿರುವ ಮಹಾನಗರ ಪಾಲಿಕೆಯ ಮೇಯರ್ ಚುನಾವಣೆಯಲ್ಲಿ ಭಾಗವಹಿಸಿ ಜೆಡಿಎಸ್ ಪಕ್ಷದ ಅಭ್ಯರ್ಥಿಗೆ ಮತ ಹಾಕುತ್ತೇನೆ. ನಾನು ಇದ್ದುದ್ದನ್ನು ನೇರವಾಗಿ ಹೇಳುತ್ತೇನೆ ನನಗೆ ಕ್ರಿಮಿನಲ್ ಮೈಂಡ್ ಇಲ್ಲ ಎಂದು ಶಾಸಕ ಜಿ. ಟಿ. ದೇವೇಗೌಡ ಪರೋಕ್ಷವಾಗಿ ಸಾ. ರಾ. ಮಹೇಶ್ ವಿರುದ್ಧ ಮತ್ತೊಮ್ಮೆ ತಮ್ಮ ಅಸಮಾಧಾನ ಹೊರಹಾಕಿದರು.
ಇಂದು ಮೈಸೂರು ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಕ್ಷೇತ್ರದ ಬಗ್ಗೆ ಸಭೆ ನಡೆಸಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿ 18 ರಂದು ನಡೆಯಲಿರುವ ಮಹಾನಗರ ಪಾಲಿಕೆಯ ಮೇಯರ್ ಚುನಾವಣೆಯಲ್ಲಿ ಮೇಯರ್ ಅಭ್ಯರ್ಥಿ ಅನ್ನು ಆಯ್ಕೆ ಮಾಡುವ ಅಧಿಕಾರವನ್ನು ಸಾ.ರಾ.ಮಹೇಶ್ ಅವರಿಗೆ ಕುಮಾರಸ್ವಾಮಿ ಅವರು ಕೊಟ್ಟಿದ್ದಾರೆ. ಅದೇ ರೀತಿ ಅವರು ಆಯ್ಕೆ ಮಾಡುತ್ತಾರೆ. ನಾನು ಎರಡೂ ವರ್ಷ ತಟಸ್ಥವಾಗಿ, ಆರೋಗ್ಯವಾಗಿರಲಿ ಎಂದು ನನ್ನನ್ನು ಬಿಟ್ಟಿದ್ದಾರೆ.
ನಾನು ಮೇಯರ್ ಚುನಾವಣೆಯಲ್ಲಿ ಜೆ.ಡಿ.ಎಸ್. ಪಕ್ಷದ ಅಭ್ಯರ್ಥಿಗೆ ಮತ ಹಾಕುತ್ತೇನೆ. ಮೇಯರ್ ಚುನಾವಣೆಯಲ್ಲಿ ನಾನು ಭಾಗವಹಿಸುತ್ತೇನೆ. ನಾನು ಇದ್ದುದ್ದನ್ನು ನೇರವಾಗಿ ಹೇಳುತ್ತೇನೆ ನನಗೆ ಕ್ರಿಮಿನಲ್ ಮೈಂಡ್ ಇಲ್ಲ ಎಂದು ಪರೋಕ್ಷವಾಗಿ ಸಾ. ರಾ. ಮಹೇಶ್ ವಿರುದ್ಧ ಮತ್ತೊಮ್ಮೆ ತಮ್ಮ ಅಸಮಾಧಾನ ಹೊರಹಾಕಿದರು.