ಕರ್ನಾಟಕ

karnataka

ETV Bharat / city

ಹಸ್ತಪ್ರತಿ ಸಂರಕ್ಷಣಾ ಕೇಂದ್ರಕ್ಕೆ ಚಾಲನೆ ನೀಡಿದ ಮೈಸೂರು ವಿವಿ ಕುಲಪತಿ - University of Mysore

ಮೈಸೂರು ವಿವಿ ಅಧೀನದಲ್ಲಿರುವ ಪ್ರಾಚ್ಯ ವಿದ್ಯಾ ಸಂಶೋಧನಾಲಯದಲ್ಲಿನ ಪುರಾತನ ಕಾಲದ ಹಸ್ತಪ್ರತಿಗಳನ್ನು ಸಂರಕ್ಷಣೆ ಮಾಡುವ ಉದ್ದೇಶದಿಂದ ಫಿಮಿಗೇಷನ್ ಸೆಂಟರ್​ ಪ್ರಾರಂಭ ಮಾಡಲಾಗಿದೆ. ಇದಕ್ಕೆ ವಿವಿ ಕುಲಪತಿ ಪ್ರೊ. ಹೇಮಂತ್ ಕುಮಾರ್ ಇಂದು ಚಾಲನೆ ನೀಡಿದರು.

fumigation center
ಹಸ್ತ ಪ್ರತಿ ಸಂರಕ್ಷಣಾ ಕೇಂದ್ರ

By

Published : Aug 25, 2020, 2:26 PM IST

ಮೈಸೂರು: ಪ್ರಾಚ್ಯ ವಿದ್ಯಾ ಸಂಶೋಧನಾಲಯದಲ್ಲಿರುವ ಪುರಾತನ ಕಾಲದ ಹಸ್ತ ಪ್ರತಿಗಳನ್ನು ಸಂರಕ್ಷಿಸುವ ಫಿಮಿಗೇಷನ್ ಸೆಂಟರ್​ಗೆ ವಿವಿ ಕುಲಪತಿ ಪ್ರೊ. ಹೇಮಂತ್ ಕುಮಾರ್ ಚಾಲನೆ ನೀಡಿದರು.

ಪುರಾತನ ಕಾಲದ ಹಸ್ತ ಪ್ರತಿ

ಮೈಸೂರು ವಿವಿ ಅಧೀನದಲ್ಲಿರುವ ಪ್ರಾಚ್ಯ ವಿದ್ಯಾ ಸಂಶೋಧನಾಲಯದಲ್ಲಿ ಪ್ರಾಚೀನ ತಾಳೆ ಗರಿ ಗ್ರಂಥಗಳು ಸೇರಿದಂತೆ ಎಲ್ಲ ಭಾಷೆಯ ಗ್ರಂಥಗಳಿವೆ. ಅದರಲ್ಲಿ ಅತಿ ಚಿಕ್ಕದಾದ ಕೌಟಿಲ್ಯನ ಅರ್ಥಶಾಸ್ತ್ರ ಸೇರಿದಂತೆ ಹಲವು ಅಮೂಲ್ಯ ಗ್ರಂಥಗಳಿವೆ. ಈ ತಾಳೆಗರಿಯ ಹಸ್ತಪ್ರತಿಗಳನ್ನು ಸಂರಕ್ಷಣೆ ಮಾಡುವ ಉದ್ದೇಶದಿಂದ ಫಿಮಿಗೇಷನ್ ಸೆಂಟರ್​ ಅನ್ನು ಪ್ರಾರಂಭ ಮಾಡಲಾಯಿತು.

ಹಸ್ತ ಪ್ರತಿ ಸಂರಕ್ಷಣಾ ಕೇಂದ್ರಕ್ಕೆ ಚಾಲನೆ
ಹಸ್ತ ಪ್ರತಿಗಳನ್ನು ರಕ್ಷಣೆಗೆ ಸಿದ್ಧತೆ

ಇಲ್ಲಿರುವ ಪುರಾತನ ಗ್ರಂಥಗಳು ಕೆಡದಂತೆ ರಾಸಾಯನಿಕಗಳಿಂದ ತೊಳೆದು ಅವುಗಳಿಗೆ ಡಿಜಿಟಲ್ ಸ್ಪರ್ಶ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದಕ್ಕಾಗಿ ಮಹಾರಾಜ ಕಾಲೇಜಿನಲ್ಲಿ ಪ್ರಾಚೀನ ಇತಿಹಾಸ ಓದುತ್ತಿರುವ ವಿದ್ಯಾರ್ಥಿಗಳನ್ನು ಇಂಟರ್ನ್​ಶಿಪ್​ಗೆ ಬಳಸಲಾಗುತ್ತಿದೆ. 2 ವರ್ಷದೊಳಗೆ ಇದನ್ನು ಸಂಪೂರ್ಣ ಡಿಜಿಟಲ್ ರೂಪದಲ್ಲಿ ತರಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಕುಲಪತಿ ಪ್ರೊ. ಹೇಮಂತ್ ಕುಮಾರ್ ತಿಳಿಸಿದ್ದಾರೆ.

ABOUT THE AUTHOR

...view details