ಮೈಸೂರು: ಪಡಿತರ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಮಾಡಿದ್ದ ಗೋಡಾನ್ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸಿರುವ ಘಟನೆ ಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಅಕ್ರಮ ಪಡಿತರ ಅಕ್ಕಿ ಸಂಗ್ರಹ: ನಾಲ್ವರ ಬಂಧನ - mysure illegal ration collection news
ಪಡಿತರ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಮಾಡಿದ್ದ ಗೋಡನ್ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸಿರುವ ಘಟನೆ ಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬಡವರಿಗೆ ಸೇರಬೇಕಿದ್ದ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಗೋಧಾಮಿನಲ್ಲಿ ಇಟ್ಟುಕೊಂಡಿದ್ದ ಶಕ್ಲೀನ್ ಷರೀಫ್ (26), ನಯಾಜ್ ಖಾನ್ (34), ಇಶಾನ್ ಬೇಗ್ (31) ಹಾಗೂ ಜಮೀರ್ ಪಾಷ (38) ಬಂಧಿತ ಆರೋಪಿಗಳು. ಇವರು ಪಡಿತರ ಅಕ್ಕಿಯನ್ನು ಗೋಡಾನ್ನಲ್ಲಿ ಸಂಗ್ರಹಿಸಿ ಅದನ್ನು ಹೆಚ್ಚಿನ ಲಾಭಕ್ಕಾಗಿ ಮಾರಾಟ ಮಾಡಲು ಸಿದ್ಧವಾಗಿದ್ದರು.
ಸಿಸಿಬಿ ಪೊಲೀಸರು ಖಚಿತ ಮಾಹಿತಿ ಮೇರೆಗೆ ಗೋಡನ್ ಮೇಲೆ ದಾಳಿ ನಡೆಸಿ 49.16 ಕ್ವಿಂಟಾಲ್ ಅಕ್ಕಿ, 1 ಎಲೆಕ್ಟ್ರಾನಿಕ್ ಯಂತ್ರ, ಚೀಲ ಹೊಲೆಯುವ ಯಂತ್ರ, 4,000 ನಗದು ಹಾಗೂ ಅಕ್ಕಿ ಸಾಗಿಸುವುದಕ್ಕಾಗಿ ಬಳಸಿದ ಟಾಟಾ ಎಕ್ಸ್ ಗೂಡ್ಸ್ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.