ಮೈಸೂರು:ಗಾಂಧೀಜಿ ಹೆಸರು ಹೇಳಲೂ ಬಿಜೆಪಿಯವರಿಗೆ ನೈತಿಕತೆ ಇಲ್ಲ ಎಂದು ಮಾಜಿ ಸಂಸದ ಆರ್.ಧ್ರುವನಾರಾಯಣ ಕಿಡಿಕಾರಿದ್ದಾರೆ.
ಗಾಂಧೀಜಿಯವರ ಹೆಸರು ಹೇಳಲೂ ಬಿಜೆಪಿಯವರಿಗೆ ನೈತಿಕತೆ ಇಲ್ಲ: ಆರ್.ಧ್ರುವನಾರಾಯಣ - ಮೈಸೂರು ಲೇಟೆಸ್ಟ್ ನ್ಯೂಸ್
ಗಾಂಧೀಜಿಯವರ ಹೆಸರು ಹೇಳಲೂ ಬಿಜೆಪಿಯವರಿಗೆ ನೈತಿಕತೆ ಇಲ್ಲ. ಯಾವುದೇ ಒಂದು ಆರ್ಎಸ್ಎಸ್ ಹಾಗೂ ಬಿಜೆಪಿ ಕಚೇರಿಯಲ್ಲಿ ಗಾಂಧೀಜಿ ಫೋಟೋ ಇಲ್ಲ. ಗಾಂಧಿಯನ್ನು ಕೊಂದ ಗೋಡ್ಸೆ ಪೂಜಿಸುವ ನಿಮಗೆ ಯಾವ ನೈತಿಕತೆ ಇದೆ. ರಾಮರಾಜ್ಯದ ಬಗ್ಗೆ ಮಾತನಾಡುವ ಅರ್ಹತೆ ನಿಮಗಿಲ್ಲ ಎಂದು ಮಾಜಿ ಸಂಸದ ಆರ್.ಧ್ರುವನಾರಾಯಣ ವಾಗ್ದಾಳಿ ನಡೆಸಿದರು.
ವರುಣಾ ವಿಧಾನಸಭಾ ಕ್ಷೇತ್ರದ ನೂತನ ಗ್ರಾಪಂ ಸದಸ್ಯರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ಗೆ ಗಾಂಧೀಜಿ ಶಾಪವಿದೆ ಎಂದು ಕಟೀಲ್ ಹೇಳುತ್ತಾರೆ. ಗಾಂಧೀಜಿ ಹೆಸರು ಹೇಳಲು ಬಿಜೆಪಿಯವರಿಗೆ ನೈತಿಕತೆ ಇಲ್ಲ. ಯಾವುದೇ ಒಂದು ಆರ್ಎಸ್ಎಸ್ ಹಾಗೂ ಬಿಜೆಪಿ ಕಚೇರಿಯಲ್ಲಿ ಗಾಂಧೀಜಿ ಫೋಟೋ ಇಲ್ಲ. ಗಾಂಧಿಯನ್ನು ಕೊಂದ ಗೋಡ್ಸೆ ಪೂಜಿಸುವ ನಿಮಗೆ ಯಾವ ನೈತಿಕತೆ ಇದೆ. ರಾಮರಾಜ್ಯದ ಬಗ್ಗೆ ಮಾತನಾಡುವ ಅರ್ಹತೆ ನಿಮಗಿಲ್ಲ ಎಂದು ವಾಗ್ದಾಳಿ ನಡೆಸಿದರು.
ಅಂಬೇಡ್ಕರ್ ಹಾಗೂ ಸಂವಿಧಾನದ ಬಗ್ಗೆ ಗೌರವಿಲ್ಲದ ನೀವು, ಕಾಂಗ್ರೆಸ್ ಬಗ್ಗೆ ಮಾತನಾಡುತ್ತೀರಾ?. ದೇಶಕ್ಕೆ ಕಾಂಗ್ರೆಸ್ ಅಪಾರ ಕೊಡುಗೆ ನೀಡಿದೆ. ನಿಮ್ಮ ಪಕ್ಷದವರು ದೇಶವನ್ನು ಯಾವ ಸ್ಥಿತಿಗೆ ತಂದಿದೆ ಒಮ್ಮೆ ಯೋಚಿಸಿ ಎಂದು ಕಿಡಿಕಾರಿದರು.