ಮೈಸೂರು: ಬಿಜೆಪಿ ಅಭ್ಯರ್ಥಿ ಹೆಚ್.ವಿಶ್ವನಾಥ್ ಪರ ಪ್ರಚಾರ ಮಾಡಲು ಬಂದ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ಗೆ ಗ್ರಾಮಸ್ಥರು ಪ್ರಚಾರ ಮಾಡದಂತೆ ಅಡ್ಡಿಪಡಿಸಿದ ಘಟನೆ ಹುಣಸೂರಿನ ಹೊಸಪುರ ಗ್ರಾಮದಲ್ಲಿ ನಡೆದಿದೆ.
ಪ್ರಚಾರದ ವೇಳೆ ಮುಜುಗರಕ್ಕೊಳಗಾಗಿ ವಾಪಸ್ ಹೋದ ಸಿ.ಪಿ. ಯೋಗೇಶ್ವರ್ - ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಹುಣಸೂರಿನ ಹೊಸಪುರ ಪ್ರಚಾರ
ಬಿಜೆಪಿ ಅಭ್ಯರ್ಥಿ ಹೆಚ್.ವಿಶ್ವನಾಥ್ ಪರ ಪ್ರಚಾರ ಮಾಡಲು ಬಂದ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ಗೆ ಗ್ರಾಮಸ್ಥರು ಪ್ರಚಾರ ಮಾಡದಂತೆ ಅಡ್ಡಿಪಡಿಸಿದ ಘಟನೆ ಹುಣಸೂರಿನ ಹೊಸಪುರ ಗ್ರಾಮದಲ್ಲಿ ನಡೆದಿದೆ.

ಎಚ್.ವಿಶ್ವನಾಥ್ ಪರ ಸಿ.ಪಿ. ಯೋಗೇಶ್ವರ್ ಪ್ರಚಾರ
ಎಚ್.ವಿಶ್ವನಾಥ್ ಪರ ಸಿ.ಪಿ. ಯೋಗೇಶ್ವರ್ ಪ್ರಚಾರ
ನಿನ್ನೆಯಷ್ಟೇ ಹೆಗ್ಗಂದೂರಿನಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ಇಂದು ಪುನಃ ಬಿಜೆಪಿ ಅಭ್ಯರ್ಥಿ ಹೆಚ್.ವಿಶ್ವನಾಥ್ ಪರ ಚುನಾವಣಾ ಪ್ರಚಾರಕ್ಕೆ ಬಂದ ಸಂದರ್ಭದಲ್ಲಿ ಹೊಸಪುರ ಗ್ರಾಮಸ್ಥರು ಯೋಗೇಶ್ವರ್ ಅವರಿಗೆ ಪ್ರವೇಶ ನೀಡದೇ, ಗಲಾಟೆ ಮಾಡಿದರು. ನೀವು ಮತಯಾಚನೆಗೆ ಬರುವುದಾದರೆ ಅಭ್ಯರ್ಥಿ ಜೊತೆ ಬರಬೇಕೆಂದು ಎಚ್ಚರಿಕೆ ನೀಡಿದರು.
ಈ ಹಿಂದೆ ಗೆದ್ದ ನಂತರ ಒಮ್ಮೆಯೂ ವಿಶ್ವನಾಥ್ ಗ್ರಾಮಕ್ಕೆ ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಮುಜುಗರಕ್ಕೆ ಒಳಗಾಗಿ ಪ್ರಚಾರ ಮಾಡದೇ ಯೋಗೇಶ್ವರ್ ವಾಪಸ್ ಹಿಂತಿರುಗಿದರು.