ಕರ್ನಾಟಕ

karnataka

ETV Bharat / city

ರಾಜ್ಯಸಭೆಯಲ್ಲಿ ಬಿಜೆಪಿ ಗೆಲ್ಲಲು ನಾವಲ್ಲ, ಜೆಡಿಎಸ್​ ಕಾರಣ: ಸಿದ್ದರಾಮಯ್ಯ ಆರೋಪ - ರಾಜ್ಯಸಭೆ ಸೋಲಿನ ಬಗ್ಗೆ ಸಿದ್ದರಾಮಯ್ಯ

ರಾಜ್ಯಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲಲು ಕಾಂಗ್ರೆಸ್​​ ಅಲ್ಲ, ಜೆಡಿಎಸ್​ನವರೇ ಕಾರಣ. ಅವರಿಂದಲೇ 3ನೇ ಅಭ್ಯರ್ಥಿ ಗೆದ್ದಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟೀಕಿಸಿದರು.

ಸಿದ್ದರಾಮಯ್ಯ ಆರೋಪ
ಸಿದ್ದರಾಮಯ್ಯ ಆರೋಪ

By

Published : Jun 11, 2022, 8:07 PM IST

ಮೈಸೂರು:ಸಂಸತ್​ ಚುನಾವಣೆಯಲ್ಲಿ ಜೆಡಿಎಸ್​ನವರ ಜೊತೆ ಹೋಗಿ ನಾವು ಕೆಟ್ಟಿದ್ದೇವೆ. ಇದು ಗೊತ್ತಿದ್ದೂ ರಾಜ್ಯಸಭೆಯಲ್ಲೂ ಅವರ ಜೊತೆ ಹೋಗೋಕಾಗುತ್ತಾ. ಜೆಡಿಎಸ್​ ಜೊತೆ ಸೇರಿಕೊಂಡೇ ಪಕ್ಷ ಕೆಟ್ಟಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಮೈಸೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಂಸತ್​ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಹೋಗಿಯೇ ನಾವು ಕೆಟ್ಟಿದ್ದೇವೆ. ರಾಜ್ಯಸಭೆಯಲ್ಲಿ ಬಿಜೆಪಿ ಗೆಲ್ಲಲು ಅವರು ಕೂಡ ಕಾರಣ ಅಲ್ವಾ? ಮೊದಲು ನಾವು ಅಭ್ಯರ್ಥಿ ಹಾಕಿದ್ದೆವು. ಆನಂತರ ಅವರು ಅಭ್ಯರ್ಥಿ ನಿಲ್ಲಿಸಿದರು. ಬಿಜೆಪಿ ಗೆಲ್ಲಬಾರದಿತ್ತು ಅನ್ನೋದಿದ್ರೆ ಅವರು ಕ್ಯಾಂಡಿಡೇಟ್ ಹಾಕಬಾರದಿತ್ತು ಎಂದರು.

ಈ ಹಿಂದೆ ಮಾಜಿ ಪ್ರಧಾನಿ ದೇವೇಗೌಡರು ಚುನಾವಣೆಗೆ ನಿಂತಾಗ ನಾವು ಅಭ್ಯರ್ಥಿ ಹಾಕಿದ್ವಾ? ಇಲ್ಲ ತಾನೆ, ಅವರೂ ಕೂಡ ಅದೇ ರೀತಿ ಮಾಡಬೇಕಿತ್ತು. ಅವರು ಕುಮಾರಸ್ವಾಮಿ ಮುಖ್ಯಮಂತ್ರಿ ಆಗೋಕೆ ನಾವು ಬೆಂಬಲ ನೀಡಿರಲಿಲ್ಲವೇ?. ಈ ಬಾರಿ ಬಿಜೆಪಿ ಗೆಲ್ಲಬಾರದು ಅನ್ನೋದಿದ್ರೆ, ಅವರು ನಮಗೆ ಸಪೋರ್ಟ್ ಮಾಡಬೇಕಿತ್ತು. ಬಿಜೆಪಿ ಗೆಲ್ಲಲು ಅವರೇ ಕಾರಣ ಎಂದು ಸಿದ್ದರಾಮಯ್ಯ ಅವರು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದರು.

ಓದಿ:ಬಿ ಟೀಂ ಯಾರಾದರೇನು, ಬಿಜೆಪಿ ಯಾವತ್ತೂ ಎ ಟೀಂ: ಸಿಎಂ ಬೊಮ್ಮಾಯಿ

ABOUT THE AUTHOR

...view details