ಕರ್ನಾಟಕ

karnataka

ETV Bharat / city

ಕೋವಿಡ್ ಮಾರ್ಗಸೂಚಿ ತಪಾಸಣೆಗೆ ಪೊಲೀಸ್ ಕ್ಯಾಬ್ ತಂಡ ರಚನೆ - ಪೊಲೀಸ್ ಕಮೀಷನರ್ ಡಾ. ಚಂದ್ರಗುಪ್ತ

ಮೈಸೂರು ನಗರದಲ್ಲಿ ಕೋವಿಡ್ ಮಾರ್ಗಸೂಚಿ ಉಲ್ಲಂಘನೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ 3 ಪೊಲೀಸ್ ಕ್ಯಾಬ್ ತಂಡಗಳನ್ನು ರಚನೆ ಮಾಡಲಾಗಿದೆ. ಈ ತಂಡಗಳು ಸಾರ್ವಜನಿಕ ಸ್ಥಳಗಳು ಮದುವೆ ಮಂಟಪಗಳು, ಬಾರ್ ಅಂಡ್ ರೆಸ್ಟೋರೆಂಟ್​​ಗಳು, ಹೋಟೆಲ್​‌ಗಳು ಸೇರಿದಂತೆ ಹೆಚ್ಚು ಜನಸಂದಣಿ ಇರುವ ಸ್ಥಳಗಳಲ್ಲಿ ಕಾರ್ಯನಿರ್ವಹಿಸಲಿವೆ.

Police Cab Team
ಮೈಸೂರಿನಲ್ಲಿ ಕೋವಿಡ್ ಮಾರ್ಗಸೂಚಿ ತಪಾಸಣೆಗೆ ಪೊಲೀಸ್ ಕ್ಯಾಬ್ ತಂಡ ರಚನೆ

By

Published : Apr 21, 2021, 7:16 AM IST

ಮೈಸೂರು:ಕೋವಿಡ್-19 ಮಾರ್ಗಸೂಚಿ ಉಲ್ಲಂಘನೆ ಪ್ರಕರಣಗಳ ಪರಿಶೀಲನೆಗಾಗಿ 3 ಪೊಲೀಸ್ ಕ್ಯಾಬ್ ತಂಡಗಳನ್ನು ರಚನೆ ಮಾಡಲಾಗಿದೆ ಎಂದು ನಗರ ಪೊಲೀಸ್ ಕಮೀಷನರ್ ಡಾ. ಚಂದ್ರಗುಪ್ತ ತಿಳಿಸಿದ್ದಾರೆ.

ಮೈಸೂರಿನಲ್ಲಿ ಕೋವಿಡ್ ಮಾರ್ಗಸೂಚಿ ತಪಾಸಣೆಗೆ ಪೊಲೀಸ್ ಕ್ಯಾಬ್ ತಂಡ ರಚನೆ

ನಗರದಲ್ಲಿ ಕೋವಿಡ್ ಮಾರ್ಗಸೂಚಿ ಉಲ್ಲಂಘನೆ ಹೆಚ್ಚಾಗುತ್ತಿರುವುದನ್ನು ತಡೆಯಲು ರಚಿಸಲಾದ ಈ ತಂಡಗಳು ದೇವರಾಜ, ಕೃಷ್ಣರಾಜ ಮತ್ತು ನರಸಿಂಹರಾಜ ಉಪ ವಿಭಾಗದಲ್ಲಿ ಕೆಲಸ ನಿರ್ವಹಿಸಲಿವೆ. ಪ್ರತಿ ಕ್ಯಾಬ್​​ನಲ್ಲಿ ಓರ್ವ ಎಸ್​​​​ಐ ಮತ್ತು ಮೂವರು ಪೊಲೀಸ್ ಸಿಬ್ಬಂದಿ ಇರಲಿದ್ದಾರೆ. ಮೊದಲು ಸಾರ್ವಜನಿಕ ಸ್ಥಳಗಳಿಗೆ ತೆರಳಿ ಜನಸಂದಣಿ ಹೆಚ್ಚಾಗಿದ್ದರೆ ವಿಡಿಯೋ ಚಿತ್ರೀಕರಣ ಮಾಡಿಕೊಳ್ಳಲಿದ್ದಾರೆ. ಬಳಿಕ ಈ ವಿಡಿಯೋ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಜರುಗಿಸಲಾಗುತ್ತದೆ.

ಯಾವುದೇ ಮಾರ್ಷಲ್​ಗಳನ್ನು ಈ ಕ್ಯಾಬ್​ಗೆ ನೇಮಿಸಿಕೊಂಡಿಲ್ಲ. ಬದಲಿಗೆ ಪೊಲೀಸ್ ಸಿಬ್ಬಂದಿಯೇ ಇರುತ್ತಾರೆ. ಇವರು ಸಾರ್ವಜನಿಕ ಸ್ಥಳಗಳು ಮದುವೆ ಮಂಟಪಗಳು, ಬಾರ್ ಅಂಡ್ ರೆಸ್ಟೋರೆಂಟ್​​ಗಳು, ಹೋಟೆಲ್​‌ಗಳು, ಹೆಚ್ಚು ಜನ ಸಂದಣಿ ಇರುವ ಸ್ಥಳಗಳಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಪೊಲೀಸ್ ಕಮೀಷನರ್ ತಿಳಿಸಿದ್ದಾರೆ.

ಇದನ್ನೂ ಓದಿ:ರಾಜ್ಯದಲ್ಲಿ ನಿನ್ನೆ ಬರೋಬ್ಬರಿ 21,794 ಜನರಿಗೆ‌ ಕೊರೊನಾ ದೃಢ : 149 ಮಂದಿ ಬಲಿ

ABOUT THE AUTHOR

...view details