ಕರ್ನಾಟಕ

karnataka

ETV Bharat / city

4 ತಿಂಗಳಿಂದ ಸಂಬಳವಿಲ್ಲ: ಕೆಲಸಕ್ಕೆ ಗೈರಾಗಿ ಅರಣ್ಯ ವೀಕ್ಷಕರ ಪ್ರತಿಭಟನೆ - forest watchers Protest by due to salary

ನಾಲ್ಕು ತಿಂಗಳಿಂದ ಸಂಬಳ ನೀಡಲಾಗಿಲ್ಲ ಎಂದು ಆರೋಪಿಸಿ ಹೊರಗುತ್ತಿಗೆ ಆಧಾರದಲ್ಲಿ ಅರಣ್ಯ ಕಾಯುವ ವೀಕ್ಷಕರು ಕೆಲಸಕ್ಕೆ ಗೈರಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ಕಾರ ಸಂಬಳ ಪಾವತಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

protest
ಪ್ರತಿಭಟನೆ

By

Published : Mar 11, 2022, 8:09 PM IST

ಮೈಸೂರು:ನಾಗರಹೊಳೆ ರಾಷ್ಟ್ರೀಯ ಉದ್ಯಾನವನ್ನು ಕಾಡ್ಗಿಚ್ಚು ಹಾಗೂ ಕಳ್ಳ ಬೇಟೆಗಾರರಿಂದ ಸಂರಕ್ಷಣೆ ಮಾಡುತ್ತಿದ್ದರೂ ತಮಗೆ ನಾಲ್ಕು ತಿಂಗಳಿಂದ ಸಂಬಳ ನೀಡಲಾಗಿಲ್ಲ ಎಂದು ಸಂಕಷ್ಟಕ್ಕೊಳಗಾದ ಹೊರಗುತ್ತಿಗೆ ನೌಕರರು ಪ್ರತಿಭಟನೆ ನಡೆಸಿದರು.

ನಾಗರಹೊಳೆ ರಾಷ್ಟ್ರೀಯ ಉದ್ಯಾನವನವನ್ನು ಕಾಡ್ಗಿಚ್ಚಿನಿಂದ ಹಾಗೂ ಕಳ್ಳ ಬೇಟೆಗಳಿಂದ ರಕ್ಷಣೆ ಕೆಲಸ ಮಾಡುವ ಗುತ್ತಿಗೆ ನೌಕರರಿಗೆ ಕಳೆದ ನಾಲ್ಕು ತಿಂಗಳಿನಿಂದ ಸಂಬಳವಾಗಿಲ್ಲ. ಇದರಿಂದಾಗಿ ಅವರು ಜೀವನ ನಡೆಸುವುದು ಕಷ್ಟವಾಗಿದೆ.‌ ಜೊತೆಗೆ ಅವರನ್ನು ನಂಬಿಕೊಂಡು ಮನೆಯವರು ಇರುತ್ತಾರೆ, ಸಂಸಾರ ನಡೆಸುವುದು ಕಷ್ಟವಾಗುತ್ತಿದೆ. ನಮಗೆ ಸಂಬಳ ನೀಡಬೇಕು. ಸರ್ಕಾರದಿಂದ ನೇರವಾಗಿ ನಮಗೆ ಸಂಬಳ ನೀಡಬೇಕು ಎಂದು ತಮ್ಮ ಬೇಡಿಕೆಗಳೊಂದಿಗೆ ಗುತ್ತಿಗೆ ನೌಕರರು ಕೆಲಸಕ್ಕೆ ಗೈರಾಗಿ ಪ್ರತಿಭಟನೆ ಪ್ರಾರಂಭಿಸಿದ್ದಾರೆ.

ಹೊರಗುತ್ತಿಗೆ ಆಧಾರದ ಮೇಲೆ ನಾಗರಹೊಳೆಯಲ್ಲಿ 300 ಮಂದಿ ಅರಣ್ಯ ವೀಕ್ಷಕರು ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ ಅರಣ್ಯ ವೀಕ್ಷಕರು, ಕಚೇರಿ ಸಿಬ್ಬಂದಿ, ಹಾಗೂ ಡ್ರೈವರ್​ಗಳು ಸೇರಿದ್ದಾರೆ. ಇವರಿಗೆ 4 ತಿಂಗಳಿನಿಂದ ಸಂಬಳವಾಗಿಲ್ಲ. ಬಂಡೀಪುರದಲ್ಲಿ 250 ಸಿಬ್ಬಂದಿ ಕೆಲಸ ಮಾಡುತ್ತಿದ್ದು, ಇವರಿಗೆ 2 ತಿಂಗಳಿನಿಂದ ಸಂಬಳವಾಗಿಲ್ಲ ಎಂದು ದೂರಿದ್ದಾರೆ.

ಅರಣ್ಯ ವಾಚಕ ಸಿಬ್ಬಂದಿ ಹೊರಗುತ್ತಿಗೆ ಅಡಿಯಲ್ಲಿ ಎಷ್ಟೇ ವರ್ಷ ಕೆಲಸ ಮಾಡಿದರೂ ಯಾವ ಸೌಲಭ್ಯವು ದೊರೆಯುವುದಿಲ್ಲ. ಇಎಫ್, ಪಿಎಫ್ ಸೌಲಭ್ಯಗಳು ಇರುವುದಿಲ್ಲ. ಜೊತೆಗೆ ಸಮಯಕ್ಕೆ ಸರಿಯಾಗಿ ಸಂಬಳ‌ ಸಿಗುವುದಿಲ್ಲ. ಹಾಗಾಗಿ ಹೊರಗುತ್ತಿಗೆಯನ್ನು ನಿಷೇಧ ಮಾಡಿ ಸರ್ಕಾರವೇ ಸಂಬಳ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

ಇದನ್ನೂ ಓದಿ:ಕರ್ನಾಟಕದಲ್ಲಿ ಕಾಂಗ್ರೆಸ್ ಸದೃಢ, 2023ರ ಚುನಾವಣೆಯಲ್ಲಿ ಬದಲಾವಣೆ: ಸಂಸದ ಡಿ.ಕೆ.ಸುರೇಶ್

ABOUT THE AUTHOR

...view details