ಕರ್ನಾಟಕ

karnataka

ETV Bharat / city

ಮೈಸೂರು : ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿರುವ ವ್ಯಾಘ್ರನ ಸೆರೆಗೆ ಕಾರ್ಯಾಚರಣೆ ಆರಂಭ - ಹುಲಿ ಸೆರೆಗೆ ಕಾರ್ಯಾಚರಣೆ ಆರಂಭ

ಜಮೀನುಗಳಲ್ಲಿ ಹುಲಿ ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆ ಅಂತರಸಂತೆ, ನೂರಲಕುಪ್ಪೆ ಹಾಗೂ ಅಕ್ಕಪಕ್ಕದ ಗ್ರಾಮದ ರೈತರಿಗೆ ಜಮೀನುಗಳಿಗೆ ಹೋಗದಂತೆ ಹಾಗೂ ಜಾನುವಾರುಗಳನ್ನು ಹೊರಗೆ ಬಿಡದಂತೆ ಧ್ವನಿ ವರ್ಧಕದ ಮೂಲಕ ಅರಣ್ಯ ಇಲಾಖೆ ಸೂಚನೆ ನೀಡಿದೆ..

Forest dept starts operation to capture tiger
ಹುಲಿ ಸೆರೆಗೆ ಕಾರ್ಯಾಚರಣೆ

By

Published : Jan 5, 2022, 2:01 PM IST

ಮೈಸೂರು :ಕಳೆದ ಕೆಲವು‌ ದಿನಗಳಿಂದ ಹೆಚ್​​ಡಿಕೋಟೆಯ ಅಂತರಸಂತೆ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಕಾಣಿಸಿಕೊಂಡು ಜನರಲ್ಲಿ ಆತಂಕ ಸೃಷ್ಟಿಸಿದ್ದ ಹುಲಿಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆಯವರು ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ.

ಕಳೆದ ಭಾನುವಾರ ತಾಲೂಕಿನ ಅಂತರಸಂತೆ ಗ್ರಾಮದ ಗೋವಿಂದ ರಾಜು ಎಂಬುವರ ಹಸುವನ್ನ ಹುಲಿ‌ ಬಲಿ ಪಡೆದಿತ್ತು. ಅಲ್ಲದೇ ಕುರಿ ಕಾಯುವವರಿಗೆ ಮತ್ತು ಗ್ರಾಮಸ್ಥರಿಗೆ ಕಾಣಿಸಿತ್ತು. ಹಾಗಾಗಿ, ಹುಲಿಯ ಚಲನವಲನಗಳ ಮೇಲೆ ನಿಗಾ ಇಡಲು ಅರಣ್ಯ ಇಲಾಖೆ ಸಿಬ್ಬಂದಿ ಕ್ಯಾಮೆರಾಗಳನ್ನು ಅಳವಡಿಸಿತ್ತು.

ಕ್ಯಾಮೆರಾದಲ್ಲಿ ಹುಲಿ ಓಡಾಡಿರುವುದು ಪತ್ತೆಯಾಗಿದೆ. ಹುಲಿ ಹಸುವನ್ನು ತಿನ್ನಲು ಬಂದು ಹೋಗಿರುವುದು ಕ್ಯಾಮೆರಾದಲ್ಲಿ ಸರೆಯಾಗಿದೆ. ಅದೇ ಜಾಗದಲ್ಲಿ ಅರಣ್ಯ ಇಲಾಖೆಯವರು ಬೋನ್ ಇರಿಸಿದ್ದಾರೆ.

ಅರಣ್ಯ ಇಲಾಖೆ ಈಗಾಗಲೇ ಅಗತ್ಯ ಕ್ರಮಕೈಗೊಂಡಿದೆ. ಹುಲಿ ಬೋನಿಗೆ ಬೀಳದಿದ್ದರೆ, ಅದು ಇರುವ ಸ್ಥಳವನ್ನು ಪತ್ತೆ ಮಾಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.

ಈಗಾಗಲೇ ಸುತ್ತಮುತ್ತಲಿನ ಪ್ರದೇಶಗಳಲ್ಲಿ 20 ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಮೂರು ತಂಡಗಳನ್ನು ರಚಿಸಿ ಹುಲಿ ಸೆರೆ ಹಿಡಿಯಲು ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಜಮೀನುಗಳಿಗೆ ತೆರಳದಂತೆ ಸೂಚನೆ :ಜಮೀನುಗಳಲ್ಲಿ ಹುಲಿ ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆ ಅಂತರಸಂತೆ, ನೂರಲಕುಪ್ಪೆ ಹಾಗೂ ಅಕ್ಕಪಕ್ಕದ ಗ್ರಾಮದ ರೈತರಿಗೆ ಜಮೀನುಗಳಿಗೆ ಹೋಗದಂತೆ ಹಾಗೂ ಜಾನುವಾರುಗಳನ್ನು ಹೊರಗೆ ಬಿಡದಂತೆ ಧ್ವನಿ ವರ್ಧಕದ ಮೂಲಕ ಅರಣ್ಯ ಇಲಾಖೆ ಸೂಚನೆ ನೀಡಿದೆ.

ಅಧಿಕಾರಿಗಳ ಸಭೆ :ಹುಲಿಯನ್ನ ಸೆರೆ ಹಿಡಿಯುವ ಕುರಿತಂತೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಡಿಸಿಎಫ್​​​ಡಿ ಮಹೇಶ್ ಕುಮಾರ್ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಭೆ ನಡೆಸಿ ಸೂಕ್ತ ಕ್ರಮಕೈಗೊಳ್ಳುವ ಬಗ್ಗೆ ಚರ್ಚಿಸಲಾಗಿದೆ.

ಸ್ಥಳದಲ್ಲಿ ನಾಗರಹೊಳೆ ಡಿಸಿಎಫ್ ಮಹೇಶ್ ಕುಮಾರ್, ಎಸಿಎಫ್​​ಗಳಾದ ಗೋಪಾಲ್, ಮಹದೇವ್, ವಲಯ ಅರಣ್ಯಾಧಿಕಾರಿಗಳಾದ ಸಿದ್ದರಾಜು, ಮಧು, ಗಿರೀಶ್, ಸಿಬ್ಬಂದಿ ಅಂಥೋನಿ, ರಾಜು, ರಾಹುಲ್, ಎಸ್‌ಟಿಪಿಎಫ್ ಸಿಬ್ಬಂದಿ ಹಾಜರಿದ್ದಾರೆ.

ಇದನ್ನೂ ಓದಿ:ಮೈಸೂರು ವಿದ್ಯಾರ್ಥಿ ಅನುಮಾನಾಸ್ಪದ ಸಾವು ಪ್ರಕರಣ-ಹಲವರ ವಿಚಾರಣೆ : ಎಸ್ಪಿ ಚೇತನ್

ABOUT THE AUTHOR

...view details