ಮೈಸೂರು: ಲೋಕಸಭೆ ಚುನಾವಣೆ 2019 ರ ಹಿನ್ನೆಲೆ ಚುನಾವಣೆ ಅಕ್ರಮಗಳ ತಡೆಗೆ ನಗರದಲ್ಲಿ 12 ಸ್ಥಿರ ಕಣ್ಗಾವಲು ತಂಡ ಕಾರ್ಯಾಚರಣೆಗಿಳಿದಿದೆ.
ಲೋಕ ಚುನಾವಣೆ ಹಿನ್ನೆಲೆ... ಮೈಸೂರಿನಲ್ಲಿ ಅಕ್ರಮ ತಡೆಗೆ 12 ಸ್ಥಿರ ಕಣ್ಗಾವಲು ತಂಡ - surveillance team
ಮೈಸೂರು ನೀತಿ ಸಂಹಿತೆ ನಿರ್ವಹಣೆ ನೋಡಲ್ ಅಧಿಕಾರಿಯಾದ ಶಿಲ್ಪಾನಾಗ್ ರವರು ಚೆಕ್ ಪೋಸ್ಟ್ ಗಳ ಕಾರ್ಯವೈಖರಿಯನ್ನು ಖುದ್ದು ಪರಿಶೀಲಿಸಿದ್ದಾರೆ.

ಲೋಕಸಭೆ ಚುನಾವಣೆಯ ಮಾದರಿ ನೀತಿ ಸಂಹಿತೆ ಜಾರಿ ಹಿನ್ನೆಲೆಅಕ್ರಮಗಳ ತಡೆಗೆ ಹೊರ ಊರುಗಳಿಂದ ಮೈಸೂರು ನಗರಕ್ಕೆ ಸೇರುವ ನಂಜನಗೂಡು ರಸ್ತೆ , ಹೆಚ್.ಡಿ. ಕೋಟೆ ರಸ್ತೆ ,ಬೋಗಾದಿ ರಸ್ತೆ ,ಟಿ. ನರಸೀಪುರ ರಸ್ತೆ ,ಬನ್ನೂರು ರಸ್ತೆ,ಮಹದೇವಪುರ ರಸ್ತೆ, ಬೆಂಗಳೂರು ರಸ್ತೆ,ಕೆ.ಆರ್.ಎಸ್. ರಸ್ತೆ, ಹುಣಸೂರು ರಸ್ತೆ , ಬೆಮೆಲ್ ರಸ್ತೆ,ಕಳಸ್ತವಾಡಿ, ರಾಯಲ್ ಇನ್ ಜಂಕ್ಷನ್‌ಗಳಲ್ಲಿ ಸ್ಥಿರ ಕಣ್ಗಾವಲು ತಂಡ (ಚೆಕ್ ಪೋಸ್ಟ್) ಗಳನ್ನು ಪ್ರಾರಂಭಿಸಲಾಗಿದೆ.
ಈ ತಂಡವು 24 ಗಂಟೆಯೂ 03 ಪಾಳಿಯಲ್ಲಿ ಕಾರ್ಯ ನಿರ್ವಹಿಸಲಿದ್ದು,ಇದಕ್ಕಾಗಿ ಜಿಲ್ಲಾಧಿಕಾರಿಯವರಿಂದ 36 ಅಧಿಕಾರಿಗಳನ್ನು ನೇಮಿಸಲಾಗಿದೆ. ಈ ಟೀಮ್‌ಗೆ ಮೈಸೂರು ನಗರ ಪೊಲೀಸ್ ಘಟಕದಿಂದ ಪ್ರತಿ ಪಾಳಿಗೆ ಒಬ್ಬರು ಎಎಸ್‌ಐ ಮತ್ತು ಓರ್ವ ಪೇದೆಯಂತೆ ಒಟ್ಟು 36 ಎಎಸ್‌ಐ ಮತ್ತು 36 ಪೇದೆಗಳನ್ನು ನೇಮಕ ಮಾಡಲಾಗಿದೆ. ತಂಡದ ಅಧಿಕಾರಿಗಳು ಮೈಸೂರು ನಗರಕ್ಕೆ ಆಗಮಿಸುವ ಎಲ್ಲಾ ವಾಹನಗಳನ್ನು ಕೂಲಂಕುಷವಾಗಿ ಚೆಕ್ ಮಾಡುವ ಮೂಲಕಅಕ್ರಮ ನಗದು ಸಾಗಾಣಿಗೆ ಮತ್ತು ಇತರೇ ಚುನಾವಣಾ ಪರಿಕರಗಳ ಅಕ್ರಮ ಸಾಗಾಣಿಕೆಗೆ ಬ್ರೇಕ್ ಹಾಕಲಿದ್ದಾರೆ. ಒಂದು ವೇಳೆ ಅಕ್ರಮಗಳು ಕಂಡು ಬಂದಲ್ಲಿ ಕಾನೂನಿನ ರೀತಿಯ ಕ್ರಮ ಕೈಗೊಳ್ಳಲಾಗುತ್ತದೆ ಎನ್ನಲಾಗಿದೆ.
ಡಿಸಿಪಿ ಎಂ.ಮುತ್ತುರಾಜು ಹಾಗೂ ಮಾಡಲ್ ಚುನಾವಣಾ ಮಾದರಿ ನೀತಿ ಸಂಹಿತೆ ನಿರ್ವಹಣೆ ನೋಡಲ್ ಅಧಿಕಾರಿಯಾದ ಶಿಲ್ಪಾನಾಗ್ ರವರು ಚೆಕ್ ಪೋಸ್ಟ್ಗಳ ಕಾರ್ಯವೈಖರಿಯನ್ನು ಖುದ್ದು ಪರಿಶೀಲಿಸಿದ್ದಾರೆ.