ಕರ್ನಾಟಕ

karnataka

ETV Bharat / city

ಮೈಸೂರಿನಲ್ಲಿ ಮೊದಲ ಒಮಿಕ್ರಾನ್ ಕೇಸ್​​ ಪತ್ತೆ.. 9 ವರ್ಷದ ಬಾಲಕಿಗೆ ವಕ್ಕರಿಸಿದ ವೈರಸ್​! - ಕರ್ನಾಟಕ ಒಮಿಕ್ರಾನ್​​ ಕೇಸ್​​

Omicron variant: ವಿದೇಶದಿಂದ ಆಗಮಿಸಿದ್ದ 9 ವರ್ಷದ ಬಾಲಕಿಗೆ ಒಮಿಕ್ರಾನ್ ಸೋಂಕು ದೃಢಪಟ್ಟಿದೆ. ಮೈಸೂರಿನಲ್ಲಿ ಪತ್ತೆಯಾದ ಮೊದಲ ಒಮ್ರಿಕಾನ್ ಪ್ರಕರಣ ಇದಾಗಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

By

Published : Dec 23, 2021, 10:38 AM IST

Updated : Dec 23, 2021, 12:03 PM IST

ಮೈಸೂರು:ಕೊರೊನಾದಿಂದ ತತ್ತರಿಸಿದ್ದ ಮೈಸೂರಿಗೆ ರೂಪಾಂತರಿ ಒಮಿಕ್ರಾನ್ ವಕ್ಕರಿಸಿದೆ. ಜಿಲ್ಲೆಯಲ್ಲಿ ಮೊದಲ ಒಮಿಕ್ರಾನ್ ಪ್ರಕರಣ ಪತ್ತೆಯಾಗಿದೆ. ವಿದೇಶದಿಂದ ಆಗಮಿಸಿದ್ದ 9 ವರ್ಷದ ಬಾಲಕಿಗೆ ಒಮಿಕ್ರಾನ್ ಸೋಂಕು ತಗುಲಿರುವುದು ದೃಢಪಟ್ಟಿದೆ.

ಸದ್ಯ ಬಾಲಕಿಗೆ ಯಾವುದೇ ರೋಗ ಲಕ್ಷಣಗಳಿಲ್ಲ. ಆಕೆಯನ್ನು ಪ್ರತ್ಯೇಕವಾಗಿ ಇರಿಸಲಾಗಿದ್ದು, ಪ್ರಾಥಮಿಕ, ದ್ವಿತೀಯ ಸಂಪರ್ಕಿತರ ತಪಾಸಣೆ ಮಾಡಲಾಗುತ್ತಿದೆ ಎಂದು ಆರೋಗ್ಯಾಧಿಕಾರಿ ಮಾಹಿತಿ ನೀಡಿದ್ದಾರೆ.

ಡಿ.2ರಂದು ದೇಶದಲ್ಲಿ ಮೊದಲ ಬಾರಿಗೆ ಕರ್ನಾಟಕದಲ್ಲಿ ಒಮಿಕ್ರಾನ್ ಕೇಸ್ ಪತ್ತೆಯಾಗಿತ್ತು. ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ ಬಂದಿದ್ದ ಇಬ್ಬರು ವ್ಯಕ್ತಿಗಳಲ್ಲಿ ಕೊರೊನಾ ವೈರಸ್​​ನ ಹೊಸ ರೂಪಾಂತರಿ ಒಮಿಕ್ರಾನ್​​ ಕಂಡು ಬಂದಿತ್ತು. ಒಮಿಕ್ರಾನ್ ಪ್ರಕರಣ ಪತ್ತೆಯಾಗಿರುವುದನ್ನು ಕೇಂದ್ರ ಆರೋಗ್ಯ ಸಚಿವಾಲಯ ದೃಢಪಡಿಸಿತ್ತು.

ಇದನ್ನೂ ಓದಿ:ತೆಲಂಗಾಣದಲ್ಲಿ ಒಂದೇ ದಿನ 14 ಒಮಿಕ್ರಾನ್​ ಕೇಸ್​ ಪತ್ತೆ.. ನಾನ್​ ರಿಸ್ಕ್​ ದೇಶಗಳಿಂದ ಬಂದ ಹೆಚ್ಚು ಜನಕ್ಕೆ ವೈರಸ್​ ದೃಢ!

Last Updated : Dec 23, 2021, 12:03 PM IST

ABOUT THE AUTHOR

...view details