ಕರ್ನಾಟಕ

karnataka

ETV Bharat / city

ಮಗಳ ಮದುವೆ ದಿನವೇ ತಂದೆಗೆ ಹೃದಯಾಘಾತ : ಕಲ್ಯಾಣ ಕಣ್ತುಂಬಿಕೊಳ್ಳಲು ಬಿಡದ ವಿಧಿ! - ಮಗಳ ಮದುವೆ ದಿನ ತಂದೆಗೆ ಹೃದಯಾಘಾತ

ಮಗಳ ಮದುವೆ ದಿನವೇ ಹೃದಯಾಘಾತದಿಂದ ತಂದೆ ಮೃತಪಟ್ಟಿದ್ದಾರೆ. ಮದುವೆ ಮನೆಯಲ್ಲಿ ಸೂತಕ ಛಾಯೆ ಆವರಿಸಿದೆ..

man dies on daughters wedding day
ಮಗಳ ಮದುವೆ ದಿನವೇ ಹೃದಯಾಘಾತದಿಂದ ತಂದೆ ಸಾವು

By

Published : Feb 22, 2022, 12:26 PM IST

ಮೈಸೂರು : ಮಗಳ ಮದುವೆಯ ದಿನವೇ ತಂದೆ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಹುಣಸೂರು ತಾಲೂಕಿನ ಗಾವಡಗೆರೆ ಹೋಬಳಿಯ ಹಿರೀಕ್ಯಾತನ ಹಳ್ಳಿಯಲ್ಲಿ ನಡೆದಿದೆ.

ಹುಣಸೂರು ತಾಲೂಕಿನ ಗಾವಡಗೆರೆ ಹೋಬಳಿಯ ಹಿರೀಕ್ಯಾತನಹಳ್ಳಿಯ ಸೋಮನಾಯಕ (62) ಮೃತ ವ್ಯಕ್ತಿ. ರೇಷ್ಮೆ ಇಲಾಖೆಯ ನಿವೃತ್ತ ನೌಕರರಾಗಿದ್ದ ಇವರು ಮಗಳ ಮದುವೆಯ ದಿನವೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಸೋಮನಾಯಕ ಅವರಿಗೆ ಮೂರು ದಿನಗಳ ಹಿಂದೆ ಲಘು ಹೃದಯಾಘಾತವಾದ್ದರಿಂದ, ಚಿಕಿತ್ಸೆಗೆಂದು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸೋಮನಾಯಕ ಅವರು ಭಾನುವಾರ ಮೃತಪಟ್ಟಿದ್ದಾರೆ. ಅದೇ ದಿನ ಮೈಸೂರಿನ ಕಲ್ಯಾಣ ಮಂಟಪದಲ್ಲಿ ಮಗಳ ಮದುವೆ ನಿಗದಿಯಾಗಿತ್ತು.

ಸರಳವಾಗಿ ಮದುವೆ ನಡೆಸಿ ಸೋಮವಾರ ಸ್ವಗ್ರಾಮದಲ್ಲಿ ಸೋಮನಾಯಕ ಅವರ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಮೃತಪಟ್ಟ ಸೋಮನಾಯಕ ಅವರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

(ಇದನ್ನೂ ಓದಿ: ಹರ್ಷ ಕುಟುಂಬಕ್ಕೆ ಒಂದು ತಿಂಗಳ ವೇತನ ಕೊಡಲು ಮುಂದಾದ ಶಾಸಕ ಭರತ್ ಶೆಟ್ಟಿ)

ABOUT THE AUTHOR

...view details