ಮೈಸೂರು: ಸಾಲಬಾಧೆ ತಾಳಲಾರದೆ ಕ್ರಿಮಿನಾಶಕ ಕುಡಿದು ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಣಸೂರು ತಾಲೂಕಿನ ನೇರಳಕುಪ್ಪೆ ಗ್ರಾಮದಲ್ಲಿ ನಡೆದಿದೆ.
ಸಾಲಬಾಧೆ ತಾಳಲಾರದೆ ಕ್ರಿಮಿನಾಶಕ ಸೇವಿಸಿ ರೈತ ಆತ್ಮಹತ್ಯೆ - ಮೈಸೂರು ರೈತ ಆತ್ಮಹತ್ಯೆ
ಹುಣಸೂರು ತಾಲೂಕಿನ ನೇರಳಕುಪ್ಪೆ ಗ್ರಾಮದಲ್ಲಿ ರೈತನೋರ್ವ ಸಾಲಬಾಧೆಯಿಂದ ಬೇಸತ್ತು ಕ್ರಿಮಿನಾಶಕ ಕುಡಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಹುಣಸೂರು ತಾಲೂಕಿನ ನೇರಳಕುಪ್ಪೆ ಗ್ರಾಮದ ನಿವಾಸಿ ಜಯರಾಮ (40) ಮೃತ ವ್ಯಕ್ತಿ. ಹುಣಸೂರಿನ ಎಮ್.ಡಿ.ಸಿ.ಸಿ ಬ್ಯಾಂಕಿನಲ್ಲಿ ಬೆಳೆ ಸಾಲ, 2 ಲಕ್ಷ ರೂ. ನೀರಾವರಿ ಸಾಲ ಮತ್ತು ಎಲ್.ಟಿ ಫೈನಾನ್ಸ್‌ನಲ್ಲಿ 7 ಲಕ್ಷ ರೂ. ಟ್ರ್ಯಾಕ್ಟರ್ ಸಾಲ, ಅಲ್ಲದೇ 3 ಲಕ್ಷ ರೂ. ಕೈ ಸಾಲ ಮಾಡಿಕೊಂಡಿದ್ದ ಎಂದು ಹೇಳಲಾಗಿದೆ.
ಈ ವರ್ಷ ಅತಿವೃಷ್ಠಿಯಿಂದಾಗಿ ತಂಬಾಕು, ಜೋಳ, ಮತ್ತು ಶುಂಠಿ ಬೆಳೆ ಕೈ ಸೇರದ ಕಾರಣ ಮನನೊಂದ ರೈತ ಇಂದು ಮಧ್ಯಾಹ್ನ ಕ್ರಿಮಿನಾಶಕ ಔಷಧಿ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ. ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದರೂ ಕೂಡಾ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಪ್ರಕರಣ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.