ಮೈಸೂರು :ನಕಲಿ ಕೋವಿಡ್ ರಿಪೋರ್ಟ್ ತೋರಿಸಿ ಕೇರಳದಿಂದ ಮೈಸೂರಿಗೆ ಬರಲು ಯತ್ನಿಸಿದ ಇಬ್ಬರು ವ್ಯಕ್ತಿಗಳ ವಿರುದ್ಧ ದೂರು ದಾಖಲಾಗಿದೆ.
ನಕಲಿ ಕೋವಿಡ್ ರಿಪೋರ್ಟ್ : ಕೇರಳ ಮೂಲದ ಇಬ್ಬರ ವಿರುದ್ಧ ಪ್ರಕರಣ ದಾಖಲು - fake covid report arrest of two keralians
ಕೋವಿಡ್ ಪ್ರಮಾಣ ಪತ್ರವನ್ನು ಬಾರ್ ಕೋಡ್ ಮೂಲಕ ಸ್ಕ್ಯಾನ್ ಮಾಡಿದಾಗ ನಕಲಿ ಎಂದು ಗೊತ್ತಾಗಿದೆ. ಈ ಸಂಬಂಧ ನೋಡಲ್ ಅಧಿಕಾರಿ ಬಿ.ಮಂಜುನಾಥ್ ಕೇರಳ ಮೂಲದ ಜಬೀರ್ ಹಾಗೂ ಶರೀಫ್ ವಿರುದ್ಧ ಬೀಚನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ..
ನಕಲಿ ಕೋವಿಡ್ ರಿಪೋರ್ಟ್
ಜಬೀರ್ ಮತ್ತು ಶರೀಫ್ ಎಂಬ ಇಬ್ಬರು ವ್ಯಕ್ತಿಗಳು ವಾಹನ ಮೂಲಕ ಕೇರಳದ ಮಾನಂದವಾಡಿಯಿಂದ ಹುಣಸೂರಿಗೆ ಹೊಗುತ್ತಿದ್ದರು. ಹೆಚ್ ಡಿ ಕೋಟೆ ತಾಲೂಕಿನ ಬಾವಲಿ ಚೆಕ್ ಪೋಸ್ಟ್ ಬಳಿ ವಾಹನ ತಪಾಸಣೆ ನಡೆಸಲಾಯಿತು.
ಕೋವಿಡ್ ಪ್ರಮಾಣ ಪತ್ರವನ್ನು ಬಾರ್ ಕೋಡ್ ಮೂಲಕ ಸ್ಕ್ಯಾನ್ ಮಾಡಿದಾಗ ನಕಲಿ ಎಂದು ಗೊತ್ತಾಗಿದೆ. ಈ ಸಂಬಂಧ ನೋಡಲ್ ಅಧಿಕಾರಿ ಬಿ.ಮಂಜುನಾಥ್ ಕೇರಳ ಮೂಲದ ಜಬೀರ್ ಹಾಗೂ ಶರೀಫ್ ವಿರುದ್ಧ ಬೀಚನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.