ಕರ್ನಾಟಕ

karnataka

ETV Bharat / city

ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ನಿರ್ಮಾಣ: ಸಚಿವ ಯೋಗೇಶ್ವರ್​ ತೀರ್ಮಾನಕ್ಕೆ ತಜ್ಞರ ವಿರೋಧ - ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ನಿರ್ಮಾಣಕ್ಕೆ ತಜ್ಞರ ವಿರೋಧ

ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್ ಮೈಸೂರಿನಲ್ಲಿ ಶೀಘ್ರವೇ ಹೆಲಿಟೂರಿಸಂ ಹಾಗೂ ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ನಿರ್ಮಾಣ ಮಾಡಲು ತೀರ್ಮಾನಿಸಲಾಗಿದೆ ಎಂದು ಹೇಳಿದ್ದರು. ಸದ್ಯ ಸಚಿವರ ಹೇಳಿಕೆಗೆ ಪಾರಂಪರಿಕ ಕಮಿಟಿಯ ಸದಸ್ಯ ಪ್ರೋ.ರಂಗರಾಜು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ‌.

ropeway-to-chamundi-hill
ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ನಿರ್ಮಾಣ

By

Published : Jul 20, 2021, 6:15 PM IST

ಮೈಸೂರು: ಪ್ರವಾಸೋದ್ಯಮ ಸಚಿವರಾದ ಸಿ.ಪಿ. ಯೋಗೇಶ್ವರ್ ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ಹಾಗೂ ಸಾಂಸ್ಕೃತಿಕ ನಗರಿಗೆ ಹೆಲಿಟೂರಿಸಂ ಗೆ ಚಾಲನೆ ನೀಡಲಾಗುವುದು ಎಂಬ ಹೇಳಿಕೆಗೆ ಪಾರಂಪರಿಕ ತಜ್ಞರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಸೋಮವಾರ ತಲಕಾಡಿನ ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್ ಮೈಸೂರಿನಲ್ಲಿ ಶೀಘ್ರವೇ ಹೆಲಿಟೂರಿಸಂ ಹಾಗೂ ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ನಿರ್ಮಾಣಕ್ಕೆ ತೀರ್ಮಾನಿಸಲಾಗಿದೆ ಎಂದು ಹೇಳಿದ್ದರು. ಸದ್ಯ ಸಚಿವರ ಈ ಹೇಳಿಕೆಗೆ ಪಾರಂಪರಿಕ ಕಮಿಟಿಯ ಸದಸ್ಯ ಪ್ರೋ. ರಂಗರಾಜು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ‌.

ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ನಿರ್ಮಾಣ ವಿಚಾರ: ತಜ್ಞರಿಂದ ವಿರೋಧ

ಈ ಕುರಿತು 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಅವರು, ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ಅವಶ್ಯಕತೆ ಇಲ್ಲ. ಏಕೆಂದರೆ 5 ಕಡೆಯಿಂದ ಬೆಟ್ಟಕ್ಕೆ ಹೋಗಲು ಸುಗಮ ರಸ್ತೆಗಳಿವೆ. ಮೆಟ್ಟಿಲುಗಳ ಮೂಲಕ ಸಹ ಬೆಟ್ಟಕ್ಕೆ ಹೋಗಬಹುದಾಗಿದ್ದು, ರೋಪ್ ವೇ ನಿರ್ಮಾಣ ನೂರಾರು ಮರಗಳ ನಾಶಕ್ಕೆ ಕಾರಣವಾಗುತ್ತದೆ. ಇದರಿಂದ ಪರಿಸರಕ್ಕೆ ಧಕ್ಕೆಯಾಗುತ್ತದೆ. ಯಾವುದೇ ಕಾರಣಕ್ಕೂ ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ನಿರ್ಮಾಣ ಮಾಡಲು ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಮೈಸೂರಿನ ಲಲಿತ್​ ಮಹಲ್ ಹೆಲಿಬ್ಯಾಡ್ ಬಳಿ ನೂರಾರು ಮರಗಳನ್ನು ಕಡಿದು ಹೆಲಿಟೂರಿಸಂ ಮಾಡುವುದು ಬೇಡ. ಬೇಕಿದ್ದರೆ ಚಿತ್ರ ನಗರಿ ನಿರ್ಮಾಣವಾಗುತ್ತಿರುವ ಹಿಮ್ಮಾವು ಬಳಿ ಹೆಲಿಟೂರಿಸಂ ಆರಂಭಿಸಿದರೆ ಒಳ್ಳೆಯದಾಗುತ್ತದೆ ಎಂದು ಪ್ರೋ.ರಂಗರಾಜು ಸಲಹೆ ನೀಡಿದರು.

ABOUT THE AUTHOR

...view details