ಮೈಸೂರು: ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ಜುಲೈ 3 ರಿಂದ, ಅಂದರೆ ಇಂದಿನಿಂದ ಪ್ರತಿದಿನ ಸಂಜೆ ಅಗತ್ಯ ಸೇವೆಗಳನ್ನು ಹೊರತು ಪಡಿಸಿ, ಎಲ್ಲಾ ವಾಣಿಜ್ಯ ಚಟುವಟಿಕೆಗಳನ್ನು ಬಂದ್ ಮಾಡುವಂತೆ ಮೈಸೂರು ಜಿಲ್ಲಾಡಳಿತ ಆದೇಶಿಸಿದೆ.
ಮೈಸೂರು; ಸಂಜೆ 5ರ ನಂತರ ವಾಣಿಜ್ಯ ಚಟುವಟಿಕೆಗಳು ಸ್ತಬ್ಧ - ಸಂಜೆ ಮೈಸೂರು ಲಾಕ್ಡೌನ್
ಸಾಂಸ್ಕೃತಿಕ ನಗರದಲ್ಲಿ ಕೋವಿಡ್ ಕಾವು ಹೆಚ್ಚಾದ ಹಿನ್ನೆಲೆ ಇಂದಿನಿಂದ ಸಂಜೆ 5 ಗಂಟೆಯ ನಂತರ ಅಗತ್ಯ ಸೇವೆಗಳನ್ನು ಹೊರತು ಪಡಿಸಿ ಉಳಿದ ವಾಣಿಜ್ಯ ಚಟುವಟಿಕೆಗಳನ್ನು ನಿಲ್ಲಿಸುವಂತೆ ವ್ಯಾಪಾರಸ್ಥರಿಗೆ ಮತ್ತು ಸಾರ್ವಜನಿಕರಿಗೆ ತಿಳಿಸಲಾಯಿತು.
ಮೈಸೂರು ನಗರ
ಈ ಹಿನ್ನೆಲೆಯಲ್ಲಿ, ಇಂದು ಸಂಜೆ ನಗರದ ಪ್ರಮುಖ ರಸ್ತೆಯಲ್ಲಿ ವಾಣಿಜ್ಯ ಚಟುವಟಿಕೆಗಳನ್ನು ಸ್ಥಗಿತಗೊಳಿಸುವಂತೆ ಪೊಲೀಸರು ವ್ಯಾಪಾರಸ್ಥರಿಗೆ ತಿಳಿಸುತ್ತಿರುವ ಹಾಗೂ ವಾಹನ ಸವಾರರಿಗೆ ಬೇಗ ಮನೆ ಕಡೆ ಹೊರಡುವಂತೆ ಹೇಳಿ ಇಲ್ಲವಾದರೆ ವಾಹನವನ್ನು ಸೀಜ್ ಮಾಡುತ್ತೇವೆ ಎಂದು ಎಚ್ಚರಿಕೆ ನೀಡುತ್ತಿರುವ ದೃಶ್ಯಗಳು ನಗರದಲ್ಲಿ ಕಂಡು ಬಂದವು.