ಮೈಸೂರು:ಏಳು ವರ್ಷದಿಂದ ಶೌಚಾಲಯದಲ್ಲೇ ವಾಸವಿದ್ದ ಬಡ ಕುಟುಂಬಕ್ಕೆ ಕೊನೆಗೂ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಮನೆ ಸಿಕ್ಕಿದೆ.
13 ಜನರ ಕುಟುಂಬವೊಂದು ಕುರಿಮಂಡಿಯ ಬಳಿ ಇರುವ ಸಾರ್ವಜನಿಕ ಶೌಚಾಲಯದಲ್ಲಿ ವಾಸವಿದ್ದ ಕುರಿತು ಈಟಿವಿ ಭಾರತ 3 ದಿನಗಳ ಹಿಂದೆ ವರದಿ ಪ್ರಕಟಿಸಿತ್ತು.

ಇದನ್ನೂ ಓದಿ..ಶೌಚಾಲಯದಲ್ಲೇ ಜೀವನ... ಮನಕಲಕುತ್ತೆ ಈ ಕುಟುಂಬದ ಕರುಣಾಜನಕ ಸ್ಥಿತಿ
ಇದನ್ನು ಗಮನಿಸಿದ ಜಿಲ್ಲಾಡಳಿತ ಹಾಗೂ ಮೈಸೂರು ಮಹಾನಗರ ಪಾಲಿಕೆಯ ಅಧಿಕಾರಿಗಳು, ಕೊಳಚೆ ಅಭಿವೃದ್ಧಿ ಮಂಡಳಿ ಜೊತೆ ಮಾತುಕತೆ ನಡೆಸಿ ಬನ್ನಿಮಂಟಪದ ಬಳಿಯಿರುವ ಮನೆಯನ್ನು ಶೌಚಾಲಯದಲ್ಲಿ ವಾಸವಿದ್ದ ಬಿಂದು ಹಾಗೂ ಮನೆಯ ಹಿರಿಯರಾದ ಕೃಷ್ಣಮ್ಮ ಅವರಿಗೆ ಹಸ್ತಾಂತರಿಸಿದ್ದಾರೆ.
ನಿನ್ನೆ ಸಂಜೆಯೇ ಮಹಾನಗರ ಪಾಲಿಕೆ ವಾಹನಗಳಲ್ಲಿ ಈ ಕುಟುಂಬವನ್ನು ಹೊಸ ಮನೆಗೆ ಸ್ಥಳಾಂತರಿಸಲಾಗಿದೆ.