ಮೈಸೂರು:ದಸರಾ ಪ್ರಯುಕ್ತ ಸಾಂಸ್ಕೃತಿಕ ನಗರಿ ಮೈಸೂರು ನಗರದ ಸೌಂದರ್ಯವನ್ನು ಆಗಸದಿಂದ ಕಣ್ತುಂಬಿಕೊಳ್ಳಲು ಸ್ಥಳೀಯರು ಹಾಗೂ ಪ್ರವಾಸಿಗರಿಗೆ ಸದವಕಾಶವನ್ನು ಪ್ರವಾಸೋದ್ಯಮ ಇಲಾಖೆ ಕಲ್ಪಿಸಿದೆ. ಆದರೆ, ಇಂದು ಆಯೋಜಿಸಿದ್ದ ಹೆಲಿರೈಡ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಚಿವ ಸಿ.ಟಿ.ರವಿ ಅವರಿಗೆ ಮುಜುಗರವಾದ ಪ್ರಸಂಗ ನಡೆಯಿತು.
ಹೆಲಿಕಾಪ್ಟರ್ ಹತ್ತಿ ಆಗಸದಲ್ಲಿ ಹಾರದೆ ಕೆಳಗಿಳಿದ ಸಚಿವ ಸಿ.ಟಿ.ರವಿ... ಕಾರಣ? - ಸಚಿವ ಸಿ.ಟಿ.ರವಿಗೆ ಮುಜುಗರ
ಪ್ರವಾಸೋದ್ಯಮ ಇಲಾಖೆ ಆಯೋಜಿಸಿದ್ದ ಹೆಲಿರೈಡ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಚಿವ ಸಿ.ಟಿ.ರವಿ ಅವರಿಗೆ ಮುಜುಗರವಾದ ಪ್ರಸಂಗ ನಡೆಯಿತು.
ಪ್ರವಾಸೋದ್ಯಮ ಇಲಾಖೆಯೊಂದಿಗೆ ಹೆಲಿರೈಡ್ ಕಾರ್ಯಕ್ರಮವನ್ನು ಲಲಿತ್ ಮಹಲ್ ಹೆಲಿಪ್ಯಾಡ್ನಲ್ಲಿ ಆಯೋಜಿಸಲಾಗಿತ್ತು. ಈ ವೇಳೆ ಸಿ.ಟಿ.ರವಿ ಬಾವುಟ ಹಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮೈಸೂರು ನೋಡಲು ಹೆಲಿಕಾಪ್ಟರ್ ಬೆಲ್ಟ್ ಹಾಕಿ ಕುಳಿತರು.
ಆದರೆ, ಸಚಿವರಿಗೆ ಸಿಂಗಲ್ ಇಂಜಿನ್ ಇರುವ ಈ ಹೆಲಿಕಾಪ್ಟರ್ನಲ್ಲಿ ಹಾರಾಟಕ್ಕೆ ಅನುಮತಿ ಇಲ್ಲ ಎಂದು ಹೆಲಿಕಾಪ್ಟರ್ ಆಯೋಜಕರು ನಿರಾಕರಿಸಿದರು. ವಿಧಿಯಿಲ್ಲದೆ ಹೆಲಿಕಾಪ್ಟರ್ನಿಂದ ಸಚಿವರು ಇಳಿದರು. ಈ ಸಂದರ್ಭದಲ್ಲಿ ಮುಜುಗರವಾದರೂ ಕೊನೆಗೆ ನಾನು ಹೋಗಲು ಸಿದ್ಧನಿದ್ದೇನೆ. ಆದರೆ, ಸಚಿವರು ಹಾರಾಟ ಮಾಡಲು ಅವಕಾಶ ಇರುವುದಿಲ್ಲ. ಆದ್ದರಿಂದ ನಿರಾಕರಿಸಲಾಗಿದೆ ಎಂದು ಜಾರಿಕೊಂಡರು.