ಮೈಸೂರು: ಜಮೀನಿಗೆ ನುಗ್ಗಿದ ಕಾಡಾನೆಗಳು ಬೆಳೆಯನ್ನು ತಿಂದು, ಅಲ್ಲದೇ ಫಸಲನ್ನು ನಾಶ ಮಾಡಿರುವ ಘಟನೆ ಸರಗೂರು ತಾಲೂಕಿನ ಹಳೆ ಹೆಗ್ಗುಡಿಲು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರೈತ ಪರಶಿವಮೂರ್ತಿ ಎಂಬುವವರ ಜಮೀನಿಗೆ ಲಗ್ಗೆ ಇಟ್ಟ ಆನೆಗಳು, ನಾಲ್ಕು ಎಕರೆ ಜಮೀನಿನಲ್ಲಿ ಬೆಳೆದಿದ್ದ ಗೇಲು, ಅವರೆಕಾಳು, ತರಕಾರಿ ಗಿಡಗಳನ್ನು ತುಳಿದು ತಿಂದು ಹಾಕಿದೆ. ಅಲ್ಲದೇ, ಜಮೀನಿನಲ್ಲಿ ಹಾಕಲಾಗಿದ್ದ ತಂತಿಬೇಲಿಯನ್ನು ಮುರಿದು ಹಾಕಿದೆ. ಈಗಾಗಲೇ ಸಾಲದ ಸುಳಿಯಲ್ಲಿ ಸಿಲುಕಿದವರಿಗೆ ಕಾಡಾನೆಗಳು ಮತ್ತಷ್ಟು ಹೊಡೆತ ಕೊಡುತ್ತಿವೆ.