ಮೈಸೂರು :ನಂಜನಗೂಡು ತಾಲೂಕಿನ ತರಗನಹಳ್ಳಿ ಗ್ರಾಮದ ಸಮೀಪವಿರುವ ಕಂತೆಮಾದಪ್ಪನ ಬೆಟ್ಟದಲ್ಲಿ 1 ಮರಿ ಆನೆಯ ಜೊತೆ 4 ಕಾಡಾನೆಗಳ ಹಿಂಡು ಕಂಡು ಬಂದಿದೆ.
ಕಾಡಿನಿಂದ ನಾಡಿಗೆ ಆಹಾರ ಅರಸಿ ಬಂದು ಇಲ್ಲಿಯೇ ಬೀಡು ಬಿಟ್ಟಿರುವ ಕಾಡಾನೆಗಳ ಹಿಂಡು, ತರಗನಹಳ್ಳಿ, ಕಪ್ಪಸೋಗೆ, ಚಂದ್ರವಾಡಿ,ಯಾಲೇಹಳ್ಳಿ ಗ್ರಾಮಗಳ ರೈತರ ಜಮೀನಿಗೆ ಲಗ್ಗೆ ಇಟ್ಟು ಬೆಳೆಗಳನ್ನು ನಾಶಪಡಿಸಿವೆ.
ನಂಜನಗೂಡಿನ ಕಂತೆ ಮಾದಪ್ಪನಬೆಟ್ಟದ ಬಳಿ ಬೀಡು ಬಿಟ್ಟ ಕಾಡಾನೆಗಳ ಹಿಂಡು ರೈತರ ಜಮೀನಿನಲ್ಲಿ ಹುರುಳಿ, ಅವರೆ, ರಾಗಿ ಬೆಳೆಗಳನ್ನು ನಾಶಪಡಿಸಿರುವ ಕಾಡಾನೆಗಳು, ಕಂತೆ ಮಾದಪ್ಪನ ಬೆಟ್ಟದಲ್ಲಿ ಬೀಡುಬಿಟ್ಟಿವೆ. ಹುಲ್ಲಹಳ್ಳಿ ಪೊಲೀಸರು, ನಂಜನಗೂಡಿನ ಅರಣ್ಯ ಇಲಾಖೆ ಅಧಿಕಾರಿಗಳಾದ ರಕ್ಷಿತ್, ಜನಾರ್ಧನ್ ಮತ್ತು ಇತರೆ ಸಿಬ್ಬಂದಿ ಆನೆಗಳನ್ನು ಮರಳಿ ಕಾಡಿಗೆ ಓಡಿಸಲು ಹರಸಾಹಸ ಪಡುತ್ತಿದ್ದಾರೆ.
ಇದನ್ನೂ ಓದಿ: ನನಗೆ ಕಾಂಗ್ರೆಸ್ ನಾಯಕರ ಸರ್ಟಿಫಿಕೇಟ್ ಬೇಕಿಲ್ಲ, ಜನರ ಸರ್ಟಿಫಿಕೇಟ್ ಸಾಕು : ಸಿಎಂ ಬೊಮ್ಮಾಯಿ
ಜನರು ಆನೆಗಳನ್ನು ಕಂಡು ಚೀರಾಟ ನಡೆಸುತ್ತಿರುವ ಕಾರಣ ಅವು ಒಂದೇ ಸ್ಥಳದಲ್ಲಿ ಬೀಡುಬಿಟ್ಟಿವೆ. ಶೀಘ್ರವೇ ಕಂತೆ ಮಾದಪ್ಪನ ಬೆಟ್ಟದಲ್ಲಿರುವ ಕಾಡಾನೆಗಳನ್ನು ಕಾಡಿನತ್ತ ಓಡಿಸಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.