ಕರ್ನಾಟಕ

karnataka

ETV Bharat / city

ಪ್ರತಿಭಟನೆಗೂ ತಟ್ಟಿದ ಚುನಾವಣಾ ನೀತಿ ಸಂಹಿತೆ - ಲೋಕಸಭಾ ಚುನಾವಣೆ

ನಗರದ ಪ್ರಧಾನ ಅಂಚೆ ಕಚೇರಿ ಮುಂಭಾಗ ಹಿಂದುಳಿದ ವರ್ಗಗಳ ವತಿಯಿಂದ ಮೈಸೂರು-ಕೊಡಗು ಲೋಕಸಭಾ ಚುನಾವಣೆಗೆ ಮೈತ್ರಿ ಸರ್ಕಾರ ಹಿಂದುಳಿದ ವರ್ಗಗಳ ಅಭ್ಯರ್ಥಿಯನ್ನೇ ಕಣಕ್ಕಿಳಿಸಬೇಕು ಎಂಬ ಉದ್ದೇಶದಿಂದ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆ

By

Published : Mar 11, 2019, 4:32 PM IST

ಮೈಸೂರು: ಅಂಚೆ ಚಳವಳಿ ಮಾಡಲು ಬಂದ ಪ್ರತಿಭಟನಾಕಾರರಿಗೆ ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಪೋಸ್ಟ್ ಬಾಕ್ಸ್​ಗಳಿಗೆ ಲೆಟರ್ ಹಾಕದಂತೆ ಪೊಲೀಸರು ತಿಳಿ ಹೇಳಿದರು.

ನಗರದ ಪ್ರಧಾನ ಅಂಚೆ ಕಚೇರಿ ಮುಂಭಾಗ ಹಿಂದುಳಿದ ವರ್ಗಗಳ ವತಿಯಿಂದ ಮೈಸೂರು-ಕೊಡಗು ಲೋಕಸಭಾ ಚುನಾವಣೆಗೆ ಮೈತ್ರಿ ಸರ್ಕಾರ ಹಿಂದುಳಿದ ವರ್ಗಗಳ ಅಭ್ಯರ್ಥಿಯನ್ನೇ ಕಣಕ್ಕಿಳಿಸಬೇಕು ಎಂಬ ಉದ್ದೇಶದಿಂದ ಪ್ರತಿಭಟನೆ ನಡೆಸಿ, ಅಂಚೆ ಕಚೇರಿಗೆ ಪೋಸ್ಟ್ ಕಾಡ್೯ಗಳನ್ನು ಹಾಕಲು ಮುಂದಾಗುತ್ತಿದ್ದಂತೆ ಸ್ಥಳದಲ್ಲಿದ್ದ ಪೊಲೀಸರು, ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಯಾವುದೇ ಪೋಸ್ಟ್ ಕಾಡ್೯ಗಳನ್ನು ಹಾಕಬೇಡಿ ಎಂದು ಎಚ್ಚರಿಕೆ ನೀಡಿದರು.

ಮೈಸೂರಿನಲ್ಲಿ ಅಂಚೆ ಚಳವಳಿ ಪ್ರತಿಭಟನೆಗೆ ಅಡ್ಡಿಯಾದ ನೀತಿ ಸಂಹಿತೆ

ಪೊಲೀಸರ ಮಾತಿಗೆ ಗೌರವ ನೀಡಿದ ಪ್ರತಿಭಟನಾಕಾರರು ಪೋಸ್ಟ್ ಕಾರ್ಡ್​ಗಳನ್ನು ಹಾಕದೆ ಸ್ಥಳದಿಂದ ತೆರಳಿದರು.

ABOUT THE AUTHOR

...view details