ಕರ್ನಾಟಕ

karnataka

ETV Bharat / city

ತಮ್ಮನ ಸಾವಿನಿಂದ ಮನನೊಂದು ಅಣ್ಣ ಕೆರೆಗೆ ಜಿಗಿದು ಆತ್ಮಹತ್ಯೆ - ಲಕ್ಷ್ಮೀಪುರಂ ಪೊಲೀಸ್ ಠಾಣೆ

ಅನಾರೋಗ್ಯದಿಂದ ಮೃತಪಟ್ಟ ತಮ್ಮನ ಸಾವಿನಿಂದ ನೊಂದ ಅಣ್ಣ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

Elder brother commits suicide following brother death
ತಮ್ಮನ ಸಾವಿನಿಂದ ಮನನೊಂದು ಅಣ್ಣ ಕೆರೆಗೆ ಜಿಗಿದು ಆತ್ಮಹತ್ಯೆ

By

Published : Mar 5, 2021, 4:07 AM IST

ಮೈಸೂರು: ತಮ್ಮನ ಸಾವಿನಿಂದ ಕಂಗಲಾದ ಅಣ್ಣ ಆತ್ಮಹತ್ಯೆಗೆ ಶರಣಾಗಿರುವ ಹೃದಯವಿದ್ರಾವಕ ಘಟನೆ ಜಿಲ್ಲೆಯ ಗಣಗರ ಹುಂಡಿ ಗ್ರಾಮದಲ್ಲಿ ನಡೆದಿದೆ.

ನಾರಾಯಣ ಮೂರ್ತಿ(40) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದು, ಹತ್ತು ದಿನಗಳ ಹಿಂದೆ ನಾರಾಯಣಮೂರ್ತಿ ಅವರ ತಮ್ಮ ರವಿ ಲಿವರ್ ಜಾಂಡೀಸ್​ ಕಾರಣದಿಂದ ಕುವೆಂಪುನಗರದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

ಘಟನೆಯಿಂದ ಮಾನಸಿಕ ಆಘಾತಕ್ಕೆ ಒಳಗಾದ ನಾರಾಯಣಮೂರ್ತಿ ಅಂದೇ ಕುಟುಂಬದವರ ಕೈಗೆ ಸಿಗದೇ ನಾಪತ್ತೆಯಾಗಿದ್ದರು. ಈ ಕುರಿತು ಕುಟುಂಬದವರು ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು.

ಇದನ್ನೂ ಓದಿ:ಟರ್ಕಿಯಲ್ಲಿ ಮಿಲಿಟರಿ ಹೆಲಿಕಾಪ್ಟರ್ ಪತನ: 11 ಸೈನಿಕರು ಮೃತ

ದೂರು ದಾಖಲಾದ ವಾರದ ಬಳಿಕ ಮೈಸೂರಿನ ಕುಕ್ಕರಹಳ್ಳಿ ಕೆರೆಯಲ್ಲಿ ಕೊಳೆತು ನಾರುತ್ತಿರುವ ಮೃತದೇಹ ಪತ್ತೆಯಾಗಿದೆ. ಅನುಮಾನಗೊಂಡ ಪೊಲೀಸರು ಮಾಹಿತಿ ನೀಡಿದಾಗ, ನಾರಾಯಣ ಮೂರ್ತಿ ಅವರ ಕುಟುಂಬ ಮೃತದೇಹವನ್ನು ಗುರುತು ಹಿಡಿದಿದ್ದಾರೆ.

ತಮ್ಮನ ಸಾವಿನಿಂದ ಮನನೊಂದು ಅಣ್ಣನೂ ಸಾವನ್ನಪ್ಪಿರುವ ಹಿನ್ನೆಲೆ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.

ABOUT THE AUTHOR

...view details