ಮೈಸೂರು: 'ಏಕ್ ಲವ್ ಯಾ' ಚಿತ್ರತಂಡ ಇಂದು ಮೈಸೂರಲ್ಲಿ ಮೈಲಾರಿ ಬೆಣ್ಣೆ ದೋಸೆ ಸವಿದಿರುವ ಫೋಟೋವನ್ನು ನಿರ್ದೇಶಕ ಪ್ರೇಮ್, ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಬೆಣ್ಣೆ ದೋಸೆ ಸವಿದ ಜೋಗಿ ಪ್ರೇಮ್, ರಚಿತಾ ರಾಮ್...! - Ek Love Ya movie team in Mysore
'ಏಕ್ ಲವ್ ಯಾ' ಚಿತ್ರತಂಡ ಇಂದು ಮೈಸೂರಲ್ಲಿ ಚಾಮುಂಡಿ ದೇವಿ ದರ್ಶನ ಪಡೆದ ಬಳಿಕ ಪ್ರಸಿದ್ಧ ಮೈಲಾರಿ ಬೆಣ್ಣೆ ದೋಸೆ ಸವಿದಿದ್ದು, ಆ ಫೋಟೋಗಳನ್ನು ನಿರ್ದೇಶಕ ಪ್ರೇಮ್ ತಮ್ಮ ಟ್ವಿಟರ್ನಲ್ಲಿ ಪೋಸ್ಟ್ ಮಾಡಿ, ಊರು ಕಡೆ ದೀಪಾವಳಿ ಪಟಾಕಿ ಹೊಡೆಯಲು ಹೊರಟೆ ಎಂದು ಬರೆದುಕೊಂಡಿದ್ದಾರೆ.
ಬೆಣ್ಣೆ ದೋಸೆ ಸವಿದ ಜೋಗಿ ಪ್ರೇಮ್, ರಚಿತಾ ರಾಮ್
ಕಳೆದ ಕೆಲವು ದಿನಗಳಿಂದ 'ಏಕ್ ಲವ್ ಯಾ' ಚಿತ್ರದ ಶೂಟಿಂಗ್ ಮೈಸೂರಿನ ಸುತ್ತಮುತ್ತ ಚಿತ್ರೀಕರಣಗೊಳ್ಳುತ್ತಿದ್ದು, ದೀಪಾವಳಿ ಪ್ರಯುಕ್ತ ಚಿತ್ರೀಕರಣಕ್ಕೆ ಬಿಡುವು ಇರುವುದರಿಂದ ಇಂದು ಶೂಟಿಂಗ್ ಪ್ಯಾಕ್ ಅಪ್ ಮಾಡಿಕೊಂಡ ನಿರ್ದೇಶಕ ಪ್ರೇಮ್, ನಟಿ ರಚಿತಾ ರಾಮ್ ಅವರನ್ನು ಒಳಗೊಂಡ ಚಿತ್ರತಂಡ ಚಾಮುಂಡಿ ಬೆಟ್ಟಕ್ಕೆ ಹೋಗಿ ತಾಯಿಯ ದರ್ಶನ ಪಡೆದರು.
ನಂತರ ಪ್ರಸಿದ್ಧ ಮೈಲಾರಿ ಬೆಣ್ಣೆ ದೋಸೆ ಸವಿದಿದ್ದು, ಆ ಫೋಟೋಗಳನ್ನು ನಿರ್ದೇಶಕ ಪ್ರೇಮ್ ತಮ್ಮ ಟ್ವಿಟರ್ನಲ್ಲಿ ಪೋಸ್ಟ್ ಮಾಡಿ, ಊರು ಕಡೆ ದೀಪಾವಳಿ ಪಟಾಕಿ ಹೊಡೆಯಲು ಹೊರಟೆ ಎಂದು ಬರೆದುಕೊಂಡಿದ್ದಾರೆ.