ಕರ್ನಾಟಕ

karnataka

ETV Bharat / city

ಏಕ್ ಲವ್ ಯಾ ಟ್ರೈಲರ್ ಬಿಡುಗಡೆ.. ಚಾಮುಂಡೇಶ್ವರಿ ತಾಯಿ ಆರ್ಶೀವಾದ ಪಡೆದ ಚಿತ್ರತಂಡ - ek love ya team in chamunundeshwari temple

ಏಕ್ ಲವ್ ಯಾ ಚಿತ್ರದ ಟ್ರೈಲರ್ ಮೈಸೂರಿನಲ್ಲಿಂದು ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಚಿತ್ರ ತಂಡ ಚಾಮುಂಡಿ ಬೆಟ್ಟಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದೆ.

ek love ya film team visited mysore
ಚಾಮುಂಡೇಶ್ವರಿ ತಾಯಿಯ ಆರ್ಶೀವಾದ ಪಡೆದ ಏಕ್ ಲವ್ ಯಾ ಚಿತ್ರತಂಡ

By

Published : Feb 11, 2022, 5:48 PM IST

Updated : Feb 11, 2022, 6:14 PM IST

ಏಕ್ ಲವ್ ಯಾ ಕನ್ನಡ ಚಿತ್ರರಂಗದಲ್ಲಿ ಟೈಟಲ್ ಹಾಗೂ ಹಾಡುಗಳಿಂದಲೇ ಸಾಕಷ್ಟು ಕುತೂಹಲ ಹುಟ್ಟಿಸಿರೋ ಚಿತ್ರ. ಪ್ರೇಮ್‌ ನಿರ್ದೇಶನದ ಬಹು ನಿರೀಕ್ಷಿತ ಸಿನಿಮಾ ಏಕ್‌ ಲವ್ ಯಾ ದಲ್ಲಿ ಪ್ರೇಮ್ ಪತ್ನಿ ರಕ್ಷಿತಾ ಪ್ರೇಮ್ ಸಹೋದರ ರಾಣಾ ನಾಯಕ ನಟನಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಿದ್ದಾರೆ. ಚಿತ್ರದ ಟ್ರೈಲರ್ ಮೈಸೂರಿನಲ್ಲಿಂದು ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಚಿತ್ರ ತಂಡ ಚಾಮುಂಡಿ ಬೆಟ್ಟಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದೆ.

ಚಾಮುಂಡೇಶ್ವರಿ ತಾಯಿಯ ಆರ್ಶೀವಾದ ಪಡೆದ ಏಕ್ ಲವ್ ಯಾ ಚಿತ್ರತಂಡ

ಸಿನಿಮಾ ಫೆಬ್ರವರಿ 24ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಹೀಗಾಗಿ ಚಿತ್ರದ ಯಶಸ್ಸಿಗೆ ನಿರ್ದೇಶಕ ಪ್ರೇಮ್, ನಾಯಕ ರಾಣಾ, ನಟಿ ರೀಷ್ಮಾ ನಾಣಯ್ಯ ದೇವರ ಮೊರೆ ಹೋಗ್ತಿದ್ದಾರೆ. ಕೆಲ ದಿನಗಳ ಹಿಂದೆ ಬೆಂಗಳೂರಿನ ಬಂಡಿ ಮಹಾಕಾಳಮ್ಮ ತಾಯಿ ದರ್ಶನ ಪಡೆದಿದ್ದ, ಏಕ್ ಲವ್ ಯಾ ಚಿತ್ರತಂಡ ಇಂದು ಮೈಸೂರಿನ ಚಾಮುಂಡೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದೆ.

ಹೌದು ನಿರ್ದೇಶಕ ಜೋಗಿ ಪ್ರೇಮ್ ಆ್ಯಂಡ್​ ಟೀಮ್ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಸಿನಿಮಾದ ಯಶಸ್ಸಿಗಾಗಿ ಪ್ರಾರ್ಥಿಸಿದ್ದಾರೆ. ಹೌದು, ನಿರ್ದೇಶಕ ಪ್ರೇಮ್, ನಟ ರಾಣಾ, ನಟಿ ರೀಷ್ಮಾ ನಾಣಯ್ಯ ಸೇರಿದಂತೆ ಇಡೀ ಏಕ್ ಲವ್ ಯಾ ಚಿತ್ರತಂಡ ಮೈಸೂರಿಗೆ ಭೇಟಿ ಕೊಟ್ಟಿದೆ.

ಈ ಚಿತ್ರದಲ್ಲಿ ರಾಣಾ ಲವರ್ ಬಾಯ್ ಆಗಿ ಕಾಣಿಸಿಕೊಳ್ಳುತ್ತಿದ್ದು, ನಾಯಕಿಯರಾಗಿ ರಚಿತಾ ರಾಮ್‌ ಮತ್ತು ರೀಷ್ಮಾ ನಾಣಯ್ಯ ನಟಿಸಿದ್ದಾರೆ. ಚಿತ್ರಕ್ಕೆ ಮಹೇಂದ್ರ ಸಿಂಹ ಅವರ ಛಾಯಾಗ್ರಹಣ ಮತ್ತು ಅರ್ಜುನ್​ ಜನ್ಯ ಸಂಗೀತವಿದೆ. ರಕ್ಷಿತಾ ಫಿಲ್ಮ್ ಫ್ಯಾಕ್ಟರಿಯಲ್ಲಿ ಈ ಸಿನಿಮಾ ನಿರ್ಮಾಣ ಮಾಡಲಾಗಿದ್ದು, ಸ್ಯಾಂಡಲ್ ವುಡ್ ನಲ್ಲಿ ಜೋಗಿ ಪ್ರೇಮ್ ನಿರ್ದೇಶನ ಏಕ್ ಲವ್ ಯಾ ಚಿತ್ರದ ಕ್ರೇಜ್ ಜೋರಾಗಿದೆ.

ಇದನ್ನೂ ಓದಿ:ಸಖತ್ ಥ್ರಿಲ್ಲಿಂಗ್​ನಿಂದ ಕೂಡಿದೆ ಪುನೀತ್ ನಿರ್ಮಾಣದ ಫ್ಯಾಮಿಲಿ ಪ್ಯಾಕ್ ಚಿತ್ರದ ಟ್ರೈಲರ್

ಚಿತ್ರತಂಡ ಚಾಮುಂಡಿ ಬೆಟ್ಟಕ್ಕೆ ತೆರಳಿ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದು ಚಿತ್ರದ ಯಶಸ್ಸಿಗಾಗಿ ತೆಂಗಿನ ಕಾಯಿ ಹೊಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಮಹಿಷ ಪ್ರತಿಮೆಯಿಂದ ಚಾಮುಂಡೇಶ್ವರಿ ಸನ್ನಿಧಿಯವರೆಗೆ ಜನಪದ ಕಲಾ ತಂಡಗಳ ಮೆರವಣಿಗೆ ಮೂಲಕ ಏಕ್ ಲವ್ ಯಾ ಚಿತ್ರ ತಂಡಕ್ಕೆ ಅದ್ಧೂರಿ ಸ್ವಾಗತ ಕೋರಲಾಯಿತು.‌ ಇದೇ ಸಂಧರ್ಭದಲ್ಲಿ ನಿರ್ದೇಶಕ ಪ್ರೇಮ್ ನನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದರು.

Last Updated : Feb 11, 2022, 6:14 PM IST

ABOUT THE AUTHOR

...view details