ಮೈಸೂರು:ಕೊರೊನಾ ಮತ್ತು ಒಮಿಕ್ರಾನ್ ಆತಂಕದಿಂದ ಮೈಸೂರಿನ ಚಾಮರಾಜೇಂದ್ರ ಮೃಗಾಲಯಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದ್ದು, ಮೃಗಾಲಯಕ್ಕೆ ಆದಾಯವು ಕೂಡ ಕುಸಿಯುತ್ತಿದೆ.
2021ರ ಡಿಸೆಂಬರ್ ಕೊನೆಯ ವಾರದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿತ್ತು. ಆದರೆ, ಜನವರಿಯಿಂದ ಕೊರೊನಾ ಭೀತಿ ಶುರುವಾದ ಹಿನ್ನೆಲೆ ಪ್ರವಾಸಿಗರ ಸಂಖ್ಯೆ ಕ್ಷೀಣಿಸಿದೆ. ಪ್ರತಿದಿನ ದಿನ 8 ಸಾವಿರಕ್ಕೂ ಅಧಿಕ ಮಂದಿ ಮೃಗಾಲಯಕ್ಕೆ ಬರುತ್ತಿದ್ದರು. ಆದರೆ, ಕೊರೊನಾ ಮತ್ತು ಒಮಿಕ್ರಾನ್ ಆತಂಕದಿಂದ ಇದು 2 ಸಾವಿರಕ್ಕೆ ಇಳಿದಿದೆ. ಇದರಿಂದ ಮೃಗಾಲಯದ ಆದಾಯಕ್ಕೆ ದೊಡ್ಡ ಹೊಡೆತ ಬಿದ್ದಿದೆ.
ಮೈಸೂರು ಮೃಗಾಲಯದಲ್ಲಿ ಪ್ರವಾಸಿಗರ ಸಂಖ್ಯೆ ಇಳಿಮುಖ.. ಆದಾಯ ಖೋತಾ ವಾರಾಂತ್ಯ ಕರ್ಫ್ಯೂಗೆ ಮೃಗಾಲಯ ಬಂದ್..
ಜನವರಿ 8 ಹಾಗೂ 9 ಮತ್ತು 15 ಹಾಗೂ 16 ರಂದು ವಾರಾಂತ್ಯ ಕರ್ಫ್ಯೂ ಜಾರಿ ಇರುವ ಕಾರಣ ಅಂದು ಮೃಗಾಲಯ ಹಾಗೂ ಕಾರಂಜಿಕೆರೆಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಇದರ ನಷ್ಟ ಸರಿದೂಗಿಸಲು ಮಂಗಳವಾರದಂದು ಮೃಗಾಲಯ ಹಾಗೂ ಕಾರಂಜಿಕೆರೆ ತೆರೆಯಲು ಉದ್ದೇಶಿಸಲಾಗಿದೆ.
ಸುರಂಗ ಮಾರ್ಗ ಓಪನ್:ಒಂದೂವರೆ ವರ್ಷದ ಬಳಿಕ ಮೃಗಾಲಯಕ್ಕೆ ಸಂಪರ್ಕ ಕಲ್ಪಿಸುವ ಸುರಂಗ ಮಾರ್ಗ ಪೂರ್ಣಗೊಂಡಿದ್ದು, ಜ.11ರಂದು ಅರಣ್ಯ ಸಚಿವರು ಸುರಂಗ ಮಾರ್ಗವನ್ನು ಉದ್ಘಾಟಿಸಲಿದ್ದಾರೆ ಎಂದು ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ ತಿಳಿಸಿದ್ದಾರೆ.
ಇದನ್ನೂ ಓದಿ:ಎಂಇಎಸ್ ವಿರುದ್ಧ ಶಾಸಕಿ ಅಂಜಲಿ ನಿಂಬಾಳ್ಕರ್ ವಾಗ್ದಾಳಿ: ವಿಡಿಯೋ ವೈರಲ್