ಕರ್ನಾಟಕ

karnataka

ETV Bharat / city

ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ಬೇಡ: ಸರ್ಕಾರಕ್ಕೆ ಪ್ರಮೋದಾ ದೇವಿ ಸಲಹೆ‌ - does not need Ropeway for Chamundi Hills

ಚಾಮುಂಡಿ ಬೆಟ್ಟಕ್ಕೆ ಕಾರಿನಲ್ಲಿ, ಬೈಕ್​ನಲ್ಲಿ ಹೋಗಲು 20 ನಿಮಿಷ ಸಾಕು. ಮೆಟ್ಟಿಲು ಮಾರ್ಗವಾಗಿ ಹೋಗಲು 30 ನಿಮಿಷ ಸಾಕು. ಹೀಗಿರುವಾಗ ರೋಪ್ ವೇ ಅವಶ್ಯಕತೆ ಇಲ್ಲ ಎಂದು ಪ್ರಮೋದಾ ದೇವಿ ಅಭಿಪ್ರಾಯಪಟ್ಟಿದ್ದಾರೆ.

Pramoda Devi Wadiyar
ಪ್ರಮೋದಾ ದೇವಿ ಒಡೆಯರ್

By

Published : Apr 6, 2022, 2:29 PM IST

Updated : Apr 6, 2022, 5:21 PM IST

ಮೈಸೂರು: ‌ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ಬೇಡ ಎಂದು ರಾಜಮಾತೆ ಪ್ರಮೋದಾ ದೇವಿ ಒಡೆಯರ್ ರಾಜ್ಯ ಸರ್ಕಾರಕ್ಕೆ ಸಲಹೆ‌ ನೀಡಿದರು. ಅರಮನೆ ಆವರಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 20 ನಿಮಿಷದ ಜರ್ನಿಗೆ ರೋಪ್ ವೇ ಯಾಕೆ?. ಬೆಟ್ಟಕ್ಕೆ ಕಾರಿನಲ್ಲಿ, ಬೈಕ್​ನಲ್ಲಿ ಹೋಗಲು 20 ನಿಮಿಷ ಸಾಕು. ಮೆಟ್ಟಿಲು ಮಾರ್ಗವಾಗಿ ಹೋಗಲು 30 ನಿಮಿಷ ಸಾಕು. ಹೀಗಿರುವಾಗ ರೋಪ್ ವೇ ಅವಶ್ಯಕತೆ ಇಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಚಾಮುಂಡಿ ಬೆಟ್ಟದ ಪ್ರಾಕೃತಿಕ ಸೌಂದರ್ಯದ ಸಂರಕ್ಷಣೆ ಆಗಬೇಕು. ಬೆಟ್ಟದ ಮೇಲೆ ಟೌನ್ ಶಿಪ್ ನಿರ್ಮಾಣವಾಗುವುದು ಬೇಡ‌. ಮೂಲ ನಿವಾಸಿಗಳನ್ನ ಬಿಟ್ಟರೆ ಅನ್ಯರ ವಾಸ್ತವ್ಯಕ್ಕೆ ಅವಕಾಶ ನೀಡಬಾರದು. ಕಟ್ಟಡ ನಿರ್ಮಾಣ ಕಾರ್ಯಕ್ಕೆ ಸೂಕ್ತ ನಿರ್ಬಂಧ ವಿಧಿಸಬೇಕು ಎಂದು ಅವರು ಮನವಿ ಮಾಡಿದರು.

ಲ್ಯಾನ್ಸ್‌ಡೌನ್‌ ಕಟ್ಟಡ ಮತ್ತು ದೇವರಾಜ ಮಾರುಕಟ್ಟೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಲ್ಯಾನ್ಸ್‌ಡೌನ್‌ ಕಟ್ಟಡ ಮತ್ತು ದೇವರಾಜ ಮಾರುಕಟ್ಟೆ ಕಟ್ಟಡಗಳನ್ನು ಕೆಡವುದರಿಂದ ಮೈಸೂರಿನ ಪಾರಂಪರಿಕ ಮೌಲ್ಯಕ್ಕೆ ಧಕ್ಕೆ ಆಗುತ್ತದೆ. ಎರಡೂ ಕಟ್ಟಡಗಳ ನವೀಕರಣ ನಮಗೆ ವಹಿಸಿ. ನಾವು ಅದನ್ನು ಯಥಾಸ್ಥಿತಿಯಲ್ಲಿ ನವೀಕರಣ ಮಾಡಲು ಸಿದ್ದರಿದ್ದೇವೆ‌. ಇದೇ ಕಾರಣಕ್ಕೆ ಜಗನ್ಮೋಹನ ಅರಮನೆ, ರಾಜೇಂದ್ರ ವಿಲಾಸ ಅರಮನೆ ಯಥಾಸ್ಥಿತಿಯಲ್ಲಿ ನವೀಕರಣ ಮಾಡಿದ್ದೇವೆ. ಪಾರಂಪರಿಕ ಕಟ್ಟಡಗಳ ವಿಚಾರದಲ್ಲಿ ಸರ್ಕಾರ ಜಾಗೃತಿ ವಹಿಸಬೇಕು ಎಂದರು.

ಸರ್ಕಾರಕ್ಕೆ ಪ್ರಮೋದಾ ದೇವಿ ಸಲಹೆ‌

ಚಾಮುಂಡಿ ಬೆಟ್ಟದ ಮೇಲಿರುವ ರಾಜೇಂದ್ರ ವಿಲಾಸ ಅರಮನೆಯನ್ನು ಬಹಳ‌ ದಿ‌ನಗಳಿಂದ ಪ್ರವಾಸಿಗರಿಗೆ ಮುಚ್ಚಿದೆ. ಕಟ್ಟಡದ ಬಲಿಷ್ಠತೆ ಉತ್ತಮವಾಗಿದೆ. ತಜ್ಞರ ಅಭಿಪ್ರಾಯ‌ ಪಡೆದು ನವೀಕರಣ ಮಾಡಲಾಗುವುದು. ಅರಮನೆಯ ಪುರಾತನ ಪಾರಂಪರಿಕ ಶೈಲಿಯಲ್ಲೇ ನವೀಕರಣ‌ ಮಾಡಲಾಗುವುದು. 1975ರಿಂದ ರಾಜೇಂದ್ರ ವಿಲಾಸ ಅರಮನೆ ಹೋಟೆಲ್ ಆಗಿ ನಡೆಯುತ್ತಿತ್ತು.

1995ರಿಂದ ರಾಜೇಂದ್ರ ವಿಲಾಸ ಅರಮನೆ ಮುಚ್ಚಲ್ಪಟ್ಟಿತ್ತು. ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಯಾವುದನ್ನೂ ಬದಲಾವಣೆ ಮಾಡಿಲ್ಲ, ಕೆಲವೊಂದು ಸೇವೆಗಳಲ್ಲಿ ಮಾರ್ಪಾಡು ಮಾಡಬಹುದಷ್ಟೇ. ಗೋಪುರದ ನವೀಕರಣ ಮಾಡುವುದು ಬಹಳ ಸವಾಲಾಗಿತ್ತು. ಸದ್ಯ ಎಲ್ಲವೂ ಒಂದು ಹಂತಕ್ಕೆ ಬಂದು ನಿಂತಿದೆ. ರಾಜೇಂದ್ರ ವಿಲಾಸ ಅರಮನೆಯನ್ನ ಹೋಟೆಲ್ ಆಗಿ ಮುಂದುವರಿಸುವ ಉದ್ದೇಶವಿದೆ ಎಂದು ನವೀಕರಣ ಕಾಮಗಾರಿಯ ಚಿತ್ರಗಳನ್ನು ಪ್ರದರ್ಶಿಸಿ ವಿವರ ನೀಡಿದರು.

Last Updated : Apr 6, 2022, 5:21 PM IST

ABOUT THE AUTHOR

...view details