ಮೈಸೂರು: ಮೈಮುಲ್ ವಿಚಾರದಲ್ಲಿ ಎಲ್ಲಾ ರೀತಿಯಲ್ಲೂ ಪಿಕ್ಚರ್ ಮುಗಿದಿದೆ. ಈ ವಿಚಾರದಲ್ಲಿ ರಾಜಕೀಯ ಮಾಡುವುದು ಬೇಡ ಎಂದು ಶಾಸಕ ಜಿ.ಟಿ. ದೇವೇಗೌಡ ನಯವಾಗಿ ಸಾರಾ ಮಹೇಶ್ಗೆ ತಿರುಗೇಟು ನೀಡಿದರು.
ಮೈಮುಲ್ ಪಿಕ್ಚರ್ ಮುಗಿದಿದೆ, ರಾಜಕೀಯ ಬೇಡ : ಜಿ.ಟಿ. ದೇವೇಗೌಡ - ಮೈಸೂರು ಮೈಮುಲ್ ಚುನಾವಣೆ ಕುರಿತು ಜಿಟಿ ದೇವೇಗೌಡ ಹೇಳಿಕೆ
ಸಹಕಾರಿ ಕ್ಷೇತ್ರಕ್ಕೆ ಕೇಂದ್ರ ಸರ್ಕಾರ ಏನೂ ಮಾಡುತ್ತಿಲ್ಲ, ಆದರೆ ರಾಜ್ಯ ಸರ್ಕಾರದ ಸಹಕಾರ ಮಂತ್ರಿ ಎಸ್.ಟಿ. ಸೋಮಶೇಖರ್ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಮೈಮುಲ್ ಚುನಾವಣಾ ವಿಚಾರದಲ್ಲಿ ಪಿಕ್ಚರ್ ಮುಗಿದಿದೆ ರಾಜಕೀಯ ಕೆಸರಾಟ ಬೇಡ ಎಂದು ಪರೋಕ್ಷವಾಗಿ ಸಾ.ರಾ. ಮಹೇಶ್ ಹೇಳಿಕೆಗೆ ತಿರುಗೇಟು ನೀಡಿದರು.
ಇಂದು ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ನಗರಕ್ಕೆ ಆಗಮಿಸಿದ್ದ ಶಾಸಕರು ಮೈಮುಲ್ ಚುನಾವಣೆ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿ, ಸಣ್ಣ ವಿಚಾರ ಇಟ್ಟುಕೊಂಡು ಮೈಸೂರಿನ ಗೌರವ ಕಳೆಯಬಾರದು. ಚುನಾವಣೆ ವಿಚಾರ ಇಟ್ಟಿಕೊಂಡು ರಾಜಕೀಯ ಮಾಡಬಾರದು. ಅದು ನೆನ್ನೆಗೆ ಮುಗಿದಿದೆ, ಇನ್ನೇನಿದ್ದರೂ ಗೆದ್ದ ಅಭ್ಯರ್ಥಿಗಳು ಸಹಕಾರಿ ಕ್ಷೇತ್ರಗಳನ್ನು ಮತ್ತು ಹಾಲು ಉತ್ಪಾದಕರನ್ನು ಬಲಪಡಿಸಬೇಕು ಎಂದರು.