ಮೈಸೂರು:ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಹಾಗೂ ಸಾವಿನ ಪ್ರಮಾಣ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಟೆಸ್ಟಿಂಗ್ ಸಂಖ್ಯೆಗಳನ್ನು ಹೆಚ್ಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ತಿಳಿಸಿದ್ದಾರೆ.
ಕೊರೊನಾ ಟೆಸ್ಟಿಂಗ್ ಸಂಖ್ಯೆ ಹೆಚ್ಚಿಸಲಾಗಿದೆ: ಜಿಲ್ಲಾಧಿಕಾರಿ ಅಭಿರಾಮ್ ಶಂಕರ್
ಮೈಸೂರು ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಹಾಗೂ ಸಾವಿನ ಪ್ರಮಾಣ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಟೆಸ್ಟಿಂಗ್ ಸಂಖ್ಯೆಗಳನ್ನು ಹೆಚ್ಚಿಸಲಾಗಿದೆ. ಎಲ್ಲೆಲ್ಲಿ ಸಾವಿನ ಪ್ರಮಾಣ ಹೆಚ್ಚು ಕಂಡುಬಂದಿದೆ ಆ ಭಾಗದಲ್ಲಿ ರ್ಯಾಪಿಡ್ ಆ್ಯಂಟಿಜನ್ ಟೆಸ್ಟ್ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ತಿಳಿಸಿದ್ದಾರೆ.
ಮೊದಲ ಹಂತದಲ್ಲಿ 2,300 ಕಿಟ್ಗಳನ್ನು ಸರ್ಕಾರ ಪರೀಕ್ಷೆಗಾಗಿ ನೀಡಿದ್ದು, ಟೆಸ್ಟಿಂಗ್ ಕಿಟ್ಗಳಿಗೆ ಯಾವುದೇ ಕೊರತೆಯಿಲ್ಲ. ಎಲ್ಲೆಲ್ಲಿ ಸಾವಿನ ಪ್ರಮಾಣ ಹೆಚ್ಚು ಕಂಡುಬಂದಿದೆ ಆ ಭಾಗದಲ್ಲಿ ರ್ಯಾಪಿಡ್ ಆ್ಯಂಟಿಜನ್ ಟೆಸ್ಟ್ ಮಾಡಲಾಗುತ್ತಿದೆ. ಎನ್.ಆರ್. ಕ್ಷೇತ್ರದಲ್ಲಿ ಟೆಸ್ಟಿಂಗ್ಗಳು ಮುಂದುವರೆದಿದೆ. ಇನ್ನು, ಜೆ.ಕೆ.ಟೈರ್ಸ್ ಕಾರ್ಖಾನೆಯ 1,000 ನೌಕರರಿಗೆ ಟೆಸ್ಟ್ ಮಾಡಿದ್ದು, ಈ ಪೈಕಿ 200 ಮಂದಿಗೆ ಸೋಂಕು ದೃಢಪಟ್ಟಿದೆ. ಕಾರ್ಖಾನೆಯ ಎಲ್ಲಾ ನೌಕರರನ್ನು ಪರೀಕ್ಷೆ ಮಾಡಿಸಲು ತಿಳಿಸಿದ್ದು, ಕಂಪನಿಯವರು ಖಾಸಗಿ ಆಸ್ಪತ್ರೆ ಜೊತೆಗೆ ಟೈ-ಅಪ್ ಮಾಡಿಕೊಂಡು ಪರೀಕ್ಷೆ ಮಾಡಿಸುವುದಾಗಿ ತಿಳಿಸಿದ್ದಾರೆ.
ಕೆ.ಆರ್. ಆಸ್ಪತ್ರೆ , ಜೆಎಸ್ಎಸ್ ಆಸ್ಪತ್ರೆಯಲ್ಲಿ ಕೊರೊನಾ ಪರೀಕ್ಷೆಗಳು ನಡೆಯುತ್ತಿವೆ. ಜೊತೆಗೆ ಬಿಜಿಎಸ್ ಮತ್ತು ಅಪೋಲೋ ಆಸ್ಪತ್ರೆಯವರು ಟೆಸ್ಟಿಂಗ್ಗಾಗಿ ಅನುಮತಿ ಕೋರಿದ್ದಾರೆ. ಇನ್ನು, ಸಿಎಫ್ಟಿಆರ್ಐನವರು ಆಗಸ್ಟ್ 1ರಿಂದ ಕೊರೊನಾ ಪರೀಕ್ಷೆ ಆರಂಭಿಸಲಿದ್ದಾರೆ ಎಂದರು.