ಕರ್ನಾಟಕ

karnataka

ETV Bharat / city

ಮೈಸೂರಿಗೆ ಆಗಮಿಸುವ ಪ್ರವಾಸಿಗರಿಗೆ ಕೋವಿಡ್​ ನೆಗೆಟಿವ್ ವರದಿ ಕಡ್ಡಾಯ​ : ಡಿಸಿ ರೋಹಿಣಿ ಸಿಂಧೂರಿ

ಕೋವಿಡ್ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಏಪ್ರಿಲ್ 10 ರಿಂದ 20ರವರೆಗೆ ಹೆಚ್ಚಿನ ರಜೆಗಳು ಇರುವ ಕಾರಣದಿಂದ ಮೈಸೂರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಹೀಗಾಗಿ, ಸರ್ಕಾರದ ಗೈಡ್​ಲೈನ್ಸ್​ ಪ್ರಕಾರ ಪ್ರವಾಸಿ ತಾಣಗಳನ್ನು ಮುಚ್ಚುವುದಿಲ್ಲ ಎಂದು ಮೈಸೂರು ಡಿಸಿ ಸ್ಪಷ್ಟಪಡಿಸಿದ್ದಾರೆ.

By

Published : Apr 8, 2021, 2:16 PM IST

Updated : Apr 8, 2021, 4:11 PM IST

District Collector Rohini Sindhuri
ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ

ಮೈಸೂರು: ಏಪ್ರಿಲ್ 10 ರಿಂದ 20ರವರೆಗೆ ಹೆಚ್ಚಿನ ರಜೆಗಳು ಇರುವ ಕಾರಣದಿಂದ ಪ್ರವಾಸಿ ತಾಣಗಳನ್ನು ಮುಚ್ಚುವುದಿಲ್ಲ. ಆದರೆ, ಮೈಸೂರಿಗೆ ಬರುವವರಿಗೆ ಕೊರೊನಾ ನೆಗೆಟಿವ್ ವರದಿ ಕಡ್ಡಾಯವೆಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದರು.

ಪ್ರವಾಸಿ ತಾಣಗಳನ್ನು ಮುಚ್ಚುವುದಿಲ್ಲ, ಕೆಲವು ನಿರ್ಬಂಧ ವಿಧಿಸಲಾಗುತ್ತೆ: ಡಿಸಿ ರೋಹಿಣಿ ಸಿಂಧೂರಿ

ತಮ್ಮ ಕಚೇರಿಯಲ್ಲಿ ಮಾಧ್ಯಮದಗೋಷ್ಟಿ ನಡೆಸಿ ಮಾತನಾಡಿದ ಅವರು, ಮೈಸೂರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಜಿಲ್ಲೆಗೆ ಬರುವವರು ಕೊರೊನಾ ನೆಗೆಟಿವ್ ವರದಿ ತರಬೇಕು. ಇದರ ತಪಾಸಣೆಗಾಗಿ 300 ಹೋಂ ಗಾರ್ಡ್​ಗಳನ್ನು ನಿಯೋಜಿಸುತ್ತೇವೆ. ಸರ್ಕಾರದ ಗೈಡ್​ಲೈನ್ಸ್​ ಪ್ರಕಾರ ಪ್ರವಾಸಿ ತಾಣಗಳನ್ನು ಮುಚ್ಚುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಈ ಸಂದರ್ಭದಲ್ಲಿ ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಮಾತನಾಡಿ, ಪಾರ್ಟಿಗಳು ಹಾಗೂ ಮದುವೆ ಸಮಾರಂಭಗಳನ್ನು ಮಾಡಬೇಕಾದರೆ ಕಡ್ಡಾಯವಾಗಿ ನಗರ ಪೊಲೀಸ್ ಕಮೀಷನರ್ ಕಚೇರಿಯಿಂದ ಅನುಮತಿ ಪಡೆಯಬೇಕು. ಈ ನಿರ್ಬಂಧ 10 ದಿನಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ಆ ನಂತರ ಕೋವಿಡ್ ಪರಿಸ್ಥಿತಿಯನ್ನು ನೋಡಿಕೊಂಡು ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಓದಿ:ನಾವು ಜಾತಿ ಮೇಲಲ್ಲ, ನೀತಿ ಮೇಲೆ ರಾಜಕಾರಣ ಮಾಡ್ತಿದ್ದೇವೆ: ಡಿಕೆಶಿ

Last Updated : Apr 8, 2021, 4:11 PM IST

ABOUT THE AUTHOR

...view details