ಕರ್ನಾಟಕ

karnataka

ETV Bharat / city

ಮೈಸೂರು ಜಿಲ್ಲೆಯಲ್ಲಿ ಸೋಂಕು-ಮರಣ ಪ್ರಮಾಣ ಇಳಿಕೆ.. ಕಾರಣವೇನೆಂದು ಡಾ. ಚಿದಂಬರಂ ಹೇಳ್ತಾರೆ ಕೇಳಿ.. - ಸೋಂಕಿತರ ಪ್ರಮಾಣ ಹಾಗೂ ಸಾವಿನ ಪ್ರಮಾಣ

ಮೇ ತಿಂಗಳಿನಲ್ಲಿ 5 ರಿಂದ 6 ಸಾವಿರ ಕೋವಿಡ್ ಪರೀಕ್ಷೆ ಮಾಡಿದರೆ, 3 ಸಾವಿರ ಪಾಸಿಟಿವ್ ಪ್ರಕರಣ ಬರುತ್ತಿದ್ದವು. ಜೂನ್‌ ತಿಂಗಳಿನಲ್ಲಿ 7 ರಿಂದ 8 ಸಾವಿರ ಕೋವಿಡ್ ಪರೀಕ್ಷೆ ಮಾಡಿಸಿದರೆ, 1100 ಪಾಸಿಟಿವ್ ಪ್ರಕರಣ ಬರುತ್ತಿವೆ. ಮುಂದಿನ 15 ದಿನಗಳಲ್ಲಿ ಇನ್ನೂ ಕಡಿಮೆಯಾಗಲಿದೆ. ಅಂದರೆ ಇದಕ್ಕೆ ಕಾರಣ ಸೋಂಕಿತರನ್ನು ಈಗಾಗಲೇ ಗುರುತು ಮಾಡಿದ್ದು, ಅವರು ಚಿಕಿತ್ಸೆ ಪಡೆದು ಗುಣಮುಖರಾಗುತ್ತಿದ್ದಾರೆ..

mysore-news
ಡಾ. ಚಿದಂಬರಂ

By

Published : Jun 8, 2021, 4:20 PM IST

ಮೈಸೂರು :ಜಿಲ್ಲೆಯಲ್ಲಿ‌ ಕಳೆದ ಒಂದು ವಾರದಿಂದ ಕೋವಿಡ್ ಸೋಂಕಿತರ ಹಾಗೂ ಸಾವಿನ್ನಪ್ಪುವವರ ಪ್ರಮಾಣ ಕಡಿಮೆಯಾಗುತ್ತಿದೆ. ಇನ್ನೂ 15 ದಿನಗಳಲ್ಲಿ ಸಂಪೂರ್ಣ ಹತೋಟಿಗೆ ಬರಲಿದೆ ಎಂದು ಜಿಲ್ಲಾ ಕೋವಿಡ್ ಟೆಸ್ಟಿಂಗ್ ಮುಖ್ಯಸ್ಥರಾದ ಡಾ. ಚಿದಂಬರಂ ವಿವರಿಸಿದರು.

ಕೋವಿಡ್‌ ಸೋಂಕಿತರು, ಸಾವನ್ನಪ್ಪುವವರ ಪ್ರಮಾಣ ಇಳಿಕೆ.. ಅದಕ್ಕೆ ಕಾರಣವೂ ಇದೆ..

ಓದಿ: ರಾಜ್ಯದಲ್ಲಿ ಹರಿದಾಡುತ್ತಿರುವ ವಿಚಾರಕ್ಕೆ ಫುಲ್ ಸ್ಟಾಪ್ ಹಾಕಲು ಈ ಹೇಳಿಕೆ: ಕಾರಜೋಳ

ಕಳೆದ ಮೇ ತಿಂಗಳಿನಲ್ಲಿ ಸೋಂಕಿತರ ಪ್ರಮಾಣ ಹಾಗೂ ಸಾವಿನ ಪ್ರಮಾಣ ಹೆಚ್ಚಾಗಿತ್ತು. ಈಗ ಜೂನ್ ತಿಂಗಳಿನ ಮೊದಲ ವಾರದಲ್ಲಿ ಸೋಂಕಿತರ ಪ್ರಮಾಣ ಹಾಗೂ ಸಾವಿನ ಪ್ರಮಾಣ ಕಡಿಮೆಯಾಗುತ್ತಿದೆ.

ಮೇ ತಿಂಗಳಿನಲ್ಲಿ 5 ರಿಂದ 6 ಸಾವಿರ ಕೋವಿಡ್ ಪರೀಕ್ಷೆ ಮಾಡಿದರೆ, 3 ಸಾವಿರ ಪಾಸಿಟಿವ್ ಪ್ರಕರಣ ಬರುತ್ತಿದ್ದವು. ಜೂನ್‌ ತಿಂಗಳಿನಲ್ಲಿ 7 ರಿಂದ 8 ಸಾವಿರ ಕೋವಿಡ್ ಪರೀಕ್ಷೆ ಮಾಡಿಸಿದರೆ, 1100 ಪಾಸಿಟಿವ್ ಪ್ರಕರಣ ಬರುತ್ತಿವೆ. ಮುಂದಿನ 15 ದಿನಗಳಲ್ಲಿ ಇನ್ನೂ ಕಡಿಮೆಯಾಗಲಿದೆ. ಅಂದರೆ ಇದಕ್ಕೆ ಕಾರಣ ಸೋಂಕಿತರನ್ನು ಈಗಾಗಲೇ ಗುರುತು ಮಾಡಿದ್ದು, ಅವರು ಚಿಕಿತ್ಸೆ ಪಡೆದು ಗುಣಮುಖರಾಗುತ್ತಿದ್ದಾರೆ.

ಇನ್ನು, ಸಾವಿನ ಪ್ರಮಾಣ ಕಡಿಮೆಯಾಗುತ್ತಿದೆ. ಸೋಂಕು ಕಾಣಿಸಿದ ತಕ್ಷಣ ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಡ್, ಆಕ್ಸಿಜನ್ ಹಾಗೂ ಔಷಧಿಯ ಕೊರತೆಯಿಲ್ಲ. ಸಾವಿನ ಪ್ರಮಾಣವೂ ಗಣನೀಯವಾಗಿ ಕಡಿಮೆಯಾಗಿದೆ.

ಜೊತೆಗೆ ಮೈಸೂರು ಜಿಲ್ಲೆಯಲ್ಲಿ ವ್ಯಾಕ್ಸಿನೇಷನ್‌ 45 ವರ್ಷ ಮೇಲ್ಪಟ್ಟ 9 ಲಕ್ಷ ಜನರಿಗೆ ಮೊದಲ ಡೋಸ್ ನೀಡಲು ಗುರಿ ಹೊಂದಲಾಗಿದೆ. ಅದರಲ್ಲಿ ಶೇಕಡ ಶೇ.82ರಷ್ಟು ಗುರಿ ಸಾಧಿಸಲಾಗಿದೆ. ರಾಜ್ಯದಲ್ಲಿಮೈಸೂರು ಜಿಲ್ಲೆವ್ಯಾಕ್ಸಿನೇಷನ್‌ನಲ್ಲಿ ಮೊದಲ ಸ್ಥಾನದಲ್ಲಿದೆ.

ABOUT THE AUTHOR

...view details